ಣಿವೆ, ಸೆ. 24: ಪಾರಂಪರಿಕ ಆಚರಣೆಯಾದ ವಿಶ್ವಪ್ರಸಿದ್ಧ ಮೈಸೂರು ದಸರಾ ಉತ್ಸವದ ಪ್ರಮುಖ ಆಕಷರ್Àಣೆಯಾದ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊರುವ ಜವಾಬ್ದಾರಿ ಈ ಬಾರಿ ಮತ್ತಿಗೋಡು ಆನೆ ಶಿಬಿರದ ಅಭಿಮನ್ಯು ಆನೆಯ ಹೆಗಲೇರಿದೆ. ಕಳೆದ ಎಂಟು ವಷರ್Àಗಳಿಂದ ಸತತವಾಗಿ ದಸರಾ ಮೆರವಣಿಗೆಯ ಸಾರಥ್ಯ ವಹಿಸಿ ಚಿನ್ನದ ಅಂಬಾರಿಯನ್ನು ಹೊರುತ್ತಿದ್ದ ಅರ್ಜುನ ಆನೆಗೆ ವಯಸ್ಸು 60 ಆಗಿರುವ ಹಿನ್ನೆಲೆಯಲ್ಲಿ ಈಗ ಅರ್ಜುನನಿಗೆ ನಿವೃತ್ತಿ ಘೋಷಿಸಲು ತೀರ್ಮಾನಿಸಿರುವ ಅಧಿಕಾರಿಗಳು ಅರ್ಜುನನ ಜೊತೆ ಕಳೆದ ಹತ್ತಾರು ವಷರ್Àಗಳಿಂದ ದಸರಾ ಮೆರವಣಿಗೆಯಲ್ಲಿ ಹೆಜ್ಜೆ ಹಾಕುವ ಮೂಲಕ ತನ್ನದೇ ಆದ ಗುಣ ಸ್ವಭಾವಗಳಿಂದ ಎಲ್ಲರ ಮೆಚ್ಚುಗೆ ಗಳಿಸಿದ್ದ ಅಭಿಮನ್ಯುಗೆ ಈ ಬಾರಿ ದಸರಾ ಮೆರವಣಿಗೆಯ ಮಹತ್ತರ ಜವಾಬ್ದಾರಿ ನೀಡುವುದು ಬಹುತೇಕ ಖಚಿತವಾಗಿದ್ದು ಈಗಾಗಲೇ ಈ ಅಭಿಮನ್ಯುವನ್ನು ಮೈಸೂರು ಅರಮನೆ ಪ್ರಾಂಗಣಕ್ಕೆ ಬರಮಾಡಿಕೊಂಡು ದಸರಾ ಮೆರವಣಿಗೆಯ ತಾಲೀಮು ನಡೆಸಲು ಅಣಿಗೊಳಿಸಲಾಗಿದೆ.

750 ಕೆಜಿ ತೂಕದ ಅಂಬಾರಿಯನ್ನು ಹೊರುವ ಈ ಅಭಿಮನ್ಯು ಸಂಗಡ ಎಡ ಮತ್ತು ಬಲ ಭಾಗಗಳಿಗೆ ಎರಡು ಹೆಣ್ಣಾನೆಗಳು ಇರ ಬೇಕೆಂಬ ಕಾರಣಕ್ಕೆ ಕೊಡಗು ಜಿಲ್ಲೆಯ ದುಬಾರೆ ಸಾಕಾನೆ ಶಿಬಿರದಲ್ಲಿರುವ ವಿಜಯ ಮತ್ತು ಕಾವೇರಿ ಎಂಬ ಹೆಣ್ಣಾನೆಗಳನ್ನು ಸದ್ಯದಲ್ಲಿಯೇ ಮೈಸೂರಿಗೆ ಕರೆಸಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಸಂದರ್ಭದಲ್ಲಿ ಬರುವ ಕರೆಗೆ ಕಳಿಸಿಕೊಡಲು ಸನ್ನದ್ಧರಾಗುವಂತೆ ಕೊಡಗು ಅರಣ್ಯ

(ಮೊದಲ ಪುಟದಿಂದ) ಅಧಿಕಾರಿಗಳಿಗೆ ಮೈಸೂರು ಅರಮನೆಯ ಅಧಿಕಾರಿಗಳಿಂದ ಮಾಹಿತಿ ರವಾನೆಯಾಗಿದೆ ಎನ್ನಲಾಗಿದೆ. ಈ ಅಂಬಾರಿ ವೀರ ಅಭಿಮನ್ಯುವಿನ ಮಾವುತ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದ ವಸಂತ ಎಂಬುದು ಇಲ್ಲಿ ವಿಶೇಷÀ. 1977 ರಲ್ಲಿ ಹುಣಸೂರು ವನ್ಯಜೀವಿ ವಿಭಾಗದ ಹೆಬ್ಬಾಳ ಎಂಬ ಸ್ಥಳದಲ್ಲಿ ಸೆರೆ ಹಿಡಿಯಲಾದ ಈ ಕಾಡಾನೆಯನ್ನು ಪಳಗಿಸಿದ ವ್ಯಕ್ತಿ ಸಣ್ಣಪ್ಪ ಎಂಬ ಮಾವುತ. ಪಳಗಿದ ಈ ಆನೆಗೆ ಅಭಿಮನ್ಯು ಎಂಬ ನಾಮಕರಣ ಮಾಡಲಾಗಿತ್ತು. ಆರಂಭದಲ್ಲಿ ಈ ಆನೆಯನ್ನು ಪಳಗಿಸಿದ ಮಾವುತ ಸಣ್ಣಪ್ಪ ಎಂಬವರ ಜೊತೆ ಕಾವಾಡಿಯಾಗಿ ಈ ಆನೆಯನ್ನು ಉಪಚರಿಸುತ್ತಿದ್ದ ರೀತಿ ನೀತಿಗೆ ಸೋತು ಹೋದ ಅಭಿಮನ್ಯು ವಸಂತ ಅಲ್ಲದೇ ಬೇರೆ ಯಾರೊಬ್ಬರನ್ನು ತನ್ನ ಬಳಿ ಸುಳಿಯಲು ಬಿಡುತ್ತಿರಲಿಲ್ಲವಂತೆ. ಬಳಿಕ ಕಾವಾಡಿಯಾಗಿದ್ದ ಹುದುಗೂರಿನ ವಸಂತನಿಗೆ ಮಾವುತನಾಗಿ ಮಾಡಲಾಯಿತು. ವಸಂತ ಮಾವುತನಾದ ಬಳಿಕ ನಡೆದ ಅರಣ್ಯ ಇಲಾಖೆಯ ಕಾರ್ಯಾಚರಣೆಯಲ್ಲಿ ಇದುವರೆಗೂ 200 ಪುಂಡಾನೆಗಳನ್ನು ಹಿಡಿಯಲಾಗಿದೆ. 12 ಕ್ಕೂ ಹೆಚ್ಚು ಹುಲಿಗಳನ್ನು ಸೆರೆ ಹಿಡಿಯಲಾಗಿದೆ. ಸಮರ ವೀರನಂತೆ ಎಲ್ಲಾ ಚಟುವಟಿಕೆಗಳನ್ನು ಯಶಸ್ವಿಯಾಗಿ ನಡೆಸುತ್ತಿದ್ದ ಈ ಅಭಿಮನ್ಯುಗೆ ದೇಶದ ಬಲಿಷ್ಠವಾದ ಸಾಕಾನೆ ಎಂಬ ಖ್ಯಾತಿ ಹೆಗಲೇರಿದ್ದು ಇದೇ ಅಭಿಮನ್ಯುವನ್ನು ಕಾಡಾನೆಗಳ ಕಾರ್ಯಾಚರಣೆ ಗಳಿಗೆಂದು ಮಧ್ಯಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ ಸೇರಿದಂತೆ ಅನೇಕ ರಾಜ್ಯಗಳಿಗೆ ಕರೆದೊಯ್ಯಲಾಗಿದೆ ಎಂದು ಮಾವುತ ವಸಂತ ಹೇಳುತ್ತಾರೆ. ಕೊರೊನಾ ಹಿನ್ನೆಲೆಯಲ್ಲಿ ಮೈಸೂರು ದಸರಾ ಈ ಬಾರಿ ಜರುಗುತ್ತದೋ ಇಲ್ಲವೋ ಎಂಬ ಅನುಮಾನಗಳಿಂದ ದಸರಾದಲ್ಲಿ ಪ್ರತಿ ವರ್ಷ ಭಾಗಿಯಾಗುತ್ತಿದ್ದ ಸಾಕಾನೆಗಳನ್ನು ದಸರಾ ತಾಲೀಮು ನಡೆಸಲು ಕರೆಸಿಕೊಳ್ಳಲು ವಿಳಂಬವಾಯಿತು. ಆದರೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಜರುಗಿದ ಮೈಸೂರು ದಸರಾ ಆಚರಣಾ ಸಮಿತಿ ಸಭೆಯಲ್ಲಿ ತೀರ್ಮಾನಿಸಿದಂತೆ, ವಿಶ್ವಪಾರಂಪರಿಕ ದಸರಾವನ್ನು ಕೊರೊನಾ ಕಾರಣದಿಂದ ಸ್ಥಗಿತಗೊಳಿಸಕೂಡದು. ಕೊನೆಯ ಪಕ್ಷ ಅರಮನೆಯ ಆವರಣದೊಳಗೆ ಸರಳವಾಗಿ ಕೇವಲ ಐದು ಆನೆಗಳ ಸಂಗಡ ದಸರಾ ಅಂಬಾರಿ ಮೆರವಣಿಗೆ ನಡೆಸುವ ಮೂಲಕ ನಾಡ ಹಬ್ಬವನ್ನು ಆಚರಿಸಬೇಕು ಎಂಬ ನಿರ್ದೇಶನದ ಮೇರೆಗೆ ಇದೀಗ ಚಟುವಟಿಕೆಗಳಿಗೆ ವೇಗ ನೀಡಲಾಗಿದೆ ಎಂದು ಮೈಸೂರು ಅರಣ್ಯ ಇಲಾಖೆಯ ಡಿಸಿಎಫ್ ಎಂ.ಸಿ. ಅಲೆಗ್ಸಾಂಡರ್ ಹೇಳಿದರು.

ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವಾಲಯದ ಮಾರ್ಗಸೂಚಿಯಂತೆ 60 ವರ್ಷ ತುಂಬಿದ ಆನೆಗಳನ್ನು ಘನವಾದ ಕಾರ್ಯಗಳಿಗೆ ಬಳಸಿಕೊಳ್ಳುವಂತಿಲ್ಲ. ಹಾಗಾಗಿ ಇದೂವರೆಗೂ ಯಶಸ್ವಿಯಾಗಿ ಚಿನ್ನದ ಅಂಬಾರಿ ಹೊತ್ತ ಅರ್ಜುನನ ಬದಲು ದಷ್ಟ ಪುಷ್ಟ ಮೈಕಟ್ಟಿನೊಂದಿಗೆ ಕಳೆದ 18 ವಷರ್Àಗಳಿಂದ ಭಾರ ಹೊರುವ ತಾಲೀಮಿನಲ್ಲಿ ಪಾಲ್ಗೊಂಡು ಜನರೊಂದಿಗೂ ಸೌಜನ್ಯದಿಂದ ವರ್ತಿಸುವ ಅಭಿಮನ್ಯು ಆನೆಯ ಚಲನವಲನಗಳನ್ನು ಗುರುತಿಸಿ ಈ ಮಹತ್ತರ ಉದ್ದೇಶಕ್ಕೆ ಅಣಿಗೊಳಿಸಲಾಗುತ್ತಿದೆ. ಹಾಗೆಯೇ ಅರಮನೆಯ ರಾಜಮಾತೆಯ ಅಪೇಕ್ಷೆಯಂತೆ ನಿಶಾನೆ ಹಾಗೂ ಪಟ್ಟದ ಆನೆಗಳ ಜೊತೆಯಲ್ಲಿ ದುಬಾರೆಯ ವಿಜಯ ಹಾಗೂ ಕಾವೇರಿ ಎಂಬ ಎರಡು ಹೆಣ್ಣು ಆನೆಗಳನ್ನು ತರಿಸಿಕೊಳ್ಳುತ್ತಿದ್ದೇವೆ. ಅರಮನೆಯ ಆವರಣದೊಳಗೆ ಈ ಬಾರಿಯ ಮೆರವಣಿಗೆ ಇರುವುದರಿಂದ ಐದು ಆನೆಗಳು ಸಾಕು ಎಂಬ ತೀರ್ಮಾನಕ್ಕೆ ಬರಲಾಗಿದೆ ಎಂದು ಅಲೆಗ್ಸಾಂಡರ್ ಹೇಳಿದರು. ಒಟ್ಟಾರೆ ವಿಶ್ವಪ್ರಸಿದ್ಧ ಮೈಸೂರು ದಸರೆಗೂ ಕೊಡಗಿನ ದುಬಾರೆಯ ಸಾಕಾನೆಯ ಶಿಬಿರಕ್ಕೂ ಅವಿನಾಭಾವ ಸಂಬಂಧವಂತೂ ಇದ್ದೇ ಇದೆ. ಈ ಬಾರಿಯ ಅಂಬಾರಿ ಹೊರುವ ಅಭಿಮನ್ಯು ಸಂಗಡ ದುಬಾರೆಯ ಇಬ್ಬರು ಗಜ ರಾಣಿಯರು ಹೆಜ್ಜೆ ಹಾಕಲಿದ್ದಾರೆ ಎಂಬುದು ಇಲ್ಲಿ ವಿಶೇಷÀ.

ವಿಶೇಷÀ ವರದಿ : ಕೆ.ಎಸ್. ಮೂರ್ತಿ