ಮಡಿಕೇರಿ, ಸೆ. 24: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯು ಕೊಡಗಿನ ಹೆಸರಾಂತ ಸಾಹಿತಿ, ನಾಟಕಗಾರ, ಕವಿ, ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿಯ ನೆನಪಿನಲ್ಲಿ “ಅಪ್ಪಚ್ಚಕವಿಯವರ 152ನೇ ಜನ್ಮ ಶತಮಾನೋತ್ಸವ ಮತ್ತು ಪೊಂಗುರಿ & ಪುಸ್ತಕ ಬಿಡುಗಡೆ” ಎಂಬ ವಿಶೇಷ ಕಾರ್ಯಕ್ರಮವು ತಾ. 29 ರಂದು ಬೆಳಗ್ಗೆ 10.30 ಗಂಟೆಗೆ ನಗರದ ಓಂಕಾರೇಶ್ವರ ದೇವಸ್ಥಾನದ ಹತ್ತಿರ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ನಡೆಯಲಿದೆ.