ವೀರಾಜಪೇಟೆ, ಸೆ. 24: ಇಲ್ಲಿಗೆ ಸಮೀಪದ ಬಿಟ್ಟಂಗಾಲ ಗ್ರಾ.ಪಂ. ವ್ಯಾಪ್ತಿಯ ಅಂಬಟ್ಟಿ ಗ್ರಾಮ ನಿವಾಸಿ ಬಿ.ಜೆ. ರಕ್ಷಿತಾ ಎಂಬವರಿಗೆ ಸೇರಿದ ಹಸುವನ್ನು ಹುಲಿ ದಾಳಿ ನಡೆಸಿ ಕೊಂದು ಹಾಕಿದೆ.

ಹಸುವನ್ನು ಮೈದಾನದಲ್ಲಿ ಮೇಯಲು ಬಿಟ್ಟಿದ್ದ ಸಂದರ್ಭ ಹಾಡಹಗಲೇ ಮಧ್ಯಾಹ್ನ 3 ಗಂಟೆ ವೇಳೆ ದಾಳಿ ನಡೆಸಿದ ಹುಲಿ ಹಸುವನ್ನು ಕೊಂದು ಹಾಕಿದೆ. ಕಳೆದ 7 ತಿಂಗಳ ಹಿಂದೆ ಇದೇ ಗ್ರಾಮದ ಯೋಗೀಶ್ ಎಂಬವರಿಗೆ ಸೇರಿದ ಹಸುವನ್ನು ಹುಲಿ ದಾಳಿ ಮಾಡಿ ಕೊಂದು ಹಾಕಿತ್ತು. ಸ್ಥಳಕ್ಕೆ ಅರಣ್ಯ ಇಲಾಖಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ಹುಲಿಯ ಚಲನ-ವಲನ ಅರಿಯಲು ಸಿಸಿ ಕ್ಯಾಮರಾ ಅಳವಡಿಸಿದ್ದಾರೆ. ಹಸುವನ್ನು ಕಳೆದುಕೊಂಡ ರಕ್ಷಿತಾ ಅವರಿಗೆ ಪರಿಹಾರ ನೀಡುವ ಸಂಬಂಧ ಕ್ರಮಕೈಗೊಂಡಿದ್ದಾರೆ.