ಗೋಣಿಕೊಪ್ಪ ವರದಿ, ಸೆ. 24: ಬಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ಮಟ್ಟದ ಬಿಜೆಪಿ ಕೃಷಿ ಮೋರ್ಚಾ ಸಮಿತಿ ಸದಸ್ಯರ ಆಯ್ಕೆ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಬಲ್ಲಡಿಚಂಡ ವಿಜು ಕುಶಾಲಪ್ಪ ಅಧ್ಯಕ್ಷತೆಯಲ್ಲಿ ನಡೆಯಿತು.
ಬಿ. ಶೆಟ್ಟಿಗೇರಿ ಬಿಜೆಪಿ ಕೃಷಿ ಮೋರ್ಚಾ ಅಧ್ಯಕ್ಷರಾಗಿ ಕರ್ತೂರ ಕೆ. ಪ್ರಕಾಶ್, ಉಪಾಧ್ಯಕ್ಷರಾಗಿ ಕಡೇಮಾಡ ನಂದ ನಾಣಯ್ಯ, ಪ್ರಧಾನ ಕಾರ್ಯದರ್ಶಿಯಾಗಿ ನಾಮೇರ ಎನ್. ಅಚ್ಚಯ್ಯ, ಸಹ ಕಾರ್ಯದರ್ಶಿಯಾಗಿ ಕರ್ತೂರ ಯೋಗೇಶ್, ಪಿ.ಎಂ. ಸಂದೀಪ್, ಸಮಿತಿ ಸದಸ್ಯರಾಗಿ ಕುಂಞಂಗಡ ಕವನ್, ನಾಮೇರ ಪೂವಣ್ಣ, ಕೆ.ಕೆ. ದಿನೇಶ್ ಪೆಮ್ಮಯ್ಯ, ಚೊಟ್ಟೆಪಂಡ ಕರುಂಬಯ್ಯ, ನಾಮೇರ ಕೆ. ತಿಮ್ಮಯ್ಯ ಆಯ್ಕೆ ಮಾಡಲಾಯಿತು.
ಈ ಸಂದರ್ಭ ವೀರಾಜಪೇಟೆ ತಾಲೂಕು ಕೃಷಿ ಮೋರ್ಚಾ ಅಧ್ಯಕ್ಷ ಕಟ್ಟೇರ ಈಶ್ವರ, ಪ್ರಧಾನ ಕಾರ್ಯದರ್ಶಿ ತೋರಿರ ವಿನು, ಉಪಾಧ್ಯಕ್ಷ ಚಟ್ಟಮಾಡ ಅನಿಲ್, ಕಾರ್ಯದರ್ಶಿ ಮಲ್ಲೇಂಗಡ ದಿವಿನ್ ಇದ್ದರು.