ಮಡಿಕೇರಿ, ಸೆ. 23: ಕರ್ನಾಟಕ ಪ್ರದೇಶ ಕುರುಬರ ಸಂಘ, ಎಸ್.ಟಿ. ಹೋರಾಟ ಸಮಿತಿಯ ರಾಜ್ಯ ಅಧ್ಯಕ್ಷರಾಗಿ ಮೂಲತಃ ವೀರಾಜಪೇಟೆಯ ಕೆ.ಬಿ. ಶಾಂತಪ್ಪ ಅವರನ್ನು ನೇಮಕ ಮಾಡಲಾಗಿದೆ.ಈಗಾಗಲೇ ರಾಜ್ಯದಲ್ಲಿ ಕುರುಬ ಸಮಾಜದವರನ್ನು ಎಸ್.ಟಿ. (ಪರಿಶಿಷ್ಟ ಪಂಗಡ) ಮೀಸಲಾತಿಗೆ ಸೇರಿಸಲು ಕೇಂದ್ರ ಸರ್ಕಾರ ಕುಲಶಾಸ್ತ್ರ ಅಧ್ಯಯನ ನಡೆಸಲು ಆದೇಶ ನೀಡಿದೆ. ಶಾಂತಪ್ಪ ಅವರು ಕೊಡಗು ಜಿಲ್ಲಾ ಪರಿಷತ್‍ನ ಮಾಜೀ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು.