ಸೋಮವಾರಪೇಟೆ, ಸೆ. 23: ತಾಲೂಕಿನ ಅರಸಿನಕುಪ್ಪೆ-ಸಿದ್ಧಲಿಂಗಪುರ ಶ್ರೀ ಗಣಪತಿ ಯುವಕ ಸಂಘದ ವತಿಯಿಂದ ಅರಸಿನಕುಪ್ಪೆ ಗ್ರಾಮದ ಶ್ರೀ ಮಂಜುನಾಥ ಮತ್ತು ನವನಾಗ ಕ್ಷೇತ್ರದಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಯಿತು. ಯುವಕ ಸಂಘದ ಪದಾಧಿಕಾರಿಗಳು ದೇವಾಲಯ ಆವರಣದಲ್ಲಿ ವಿವಿಧ ಜಾತೀಯ ಹಣ್ಣು ಮತ್ತು ನೆರಳಿನ ಗಿಡಗಳನ್ನು ನೆಟ್ಟರು. ಕ್ಷೇತ್ರದ ಗುರುಗಳಾದ ಶ್ರೀರಾಜೇಶ್‍ನಾಥ್‍ಜೀ ಮಾತನಾಡಿ, ಪರಿಸರ ಸಂರಕ್ಷಣೆ ಎಲ್ಲರ ಹೊಣೆಯಾಗಿದ್ದು, ಗಿಡಮರಗಳನ್ನು ಬೆಳೆಸಿ ಉಳಿಸಬೇಕು. ಉತ್ತಮ ಪರಿಸರದಿಂದ ಮಾತ್ರ ಆರೋಗ್ಯಯುತ ಜೀವನ ಕಂಡುಕೊಳ್ಳಲು ಸಾಧ್ಯ ಎಂದು ಅಭಿಪ್ರಾಯಿಸಿದರು.
ಈ ಸಂದರ್ಭ ಸಂಘದ ಅಧ್ಯಕ್ಷ ಮಿಲನ್, ಪ್ರಧಾನ ಸಂಚಾಲಕ ಎನ್.ಪಿ. ಪ್ರಕಾಶ್, ಕಾರ್ಯದರ್ಶಿ ಹೆಚ್.ಟಿ. ಸತೀಶ್, ಗೌರವಾಧ್ಯಕ್ಷ ರಾಮಕೃಷ್ಣ, ಪ್ರದೀಪ್, ಗಿರೀಶ್, ಪ್ರಣವ್ ಸೇರಿದಂತೆ ಇತರರು ಉಪಸ್ಥಿತರಿದ್ದರು.