ಮಡಿಕೇರಿ, ಸೆ. 23: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ)ಯ ವಕ್ತಾರರನ್ನಾಗಿ ಕೊಡಗು ಜಿಲ್ಲೆಯವರಾದ ಎ.ಎಸ್. ಪೊನ್ನಣ್ಣ ಅವರನ್ನು ನೇಮಕ ಮಾಡಲಾಗಿದೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ. ಈ ಮುನ್ನ ಪೊನ್ನಣ್ಣ ಅವರನ್ನು ಕೆಪಿಸಿಸಿಯ ಮಾನವ ಹಕ್ಕುಗಳು ಹಾಗೂ ಲೀಗಲ್ ಸೆಲ್‍ನ ಅಧ್ಯಕ್ಷರನ್ನಾಗಿ ನೇಮಿಸಿದ್ದು, ಇದೀಗ ಈ ಜವಾಬ್ದಾರಿಯೊಂದಿಗೆ ಕೆಪಿಸಿಸಿಯ ವಕ್ತಾರರನ್ನಾಗಿಯೂ ನೇಮಕಗೊಳಿಸಲಾಗಿದೆ.