*ಕಡಂಗ, ಸೆ. 23: ಸುನ್ನಿ ಯುವಜನ ಸಂಘ ಕೊಡಗು ಜಿಲ್ಲಾ ಸಮಿತಿಯ ಸಾಂತ್ವನ ವಿಭಾಗ ಎಸ್‍ವೈಎಸ್ ಬೆಂಗಳೂರು ಸಹಯೋಗದಲ್ಲಿ ಸೋಮವಾರಪೇಟೆ ತಾಲೂಕಿನ ಹೊಸತೋಟದಲ್ಲಿ ನಿರ್ಮಿಸಿದ ದಾರುಲ್ ಖೈರ್ ಮನೆಯನ್ನು ಅಲ್ಲಿನ ಬಡ ಮಹಿಳೆ ನಫಿಸಾ ಅವರಿಗೆ ಹಸ್ತಾಂತರಿಸಲಾಯಿತು.

ಹಸ್ತಾಂತರ ಕಾರ್ಯಕ್ರಮದಲ್ಲಿ ಎಸ್‍ವೈಎಸ್ ಕೊಡಗು ಜಿಲ್ಲಾ ಸಾಂತ್ವನ ವಿಭಾಗ ಚೇರ್‍ಮ್ಯಾನ್ ಸಯ್ಯಿದ್ ಇಲ್ಯಾಸ್ ಸಖಾಫಿ ಅಲ್ ಹೈದ್ರೂಸಿ ತಂಙಳ್, ಕೊಡಗು ಜಿಲ್ಲಾ ಕಾರ್ಯದರ್ಶಿ ವಿ.ಪಿ. ಮೊಯ್ದೀನ್ ಪೆÇನ್ನತ್‍ಮೊಟ್ಟೆ, ಸ್ವಾಗತ ಭಾಷಣ ಮಾಡಿದರು. ಸಯ್ಯಿದ್ ಇಲ್ಯಾಸ್ ತಂಙಳ್ ಎಮ್ಮೆಮಾಡು, ಎಸ್‍ವೈಎಸ್ ಕರ್ನಾಟಕ ರಾಜ್ಯ ಮೀಡಿಯಾ ವಿಂಗ್ ಕಾರ್ಯದರ್ಶಿ ಎಂ.ವೈ. ಅಬ್ದುಲ್ ಹಫೀಳ್ ಸಅದಿ, ಬೆಂಗಳೂರು ಸಾಂತ್ವನ ವಿಭಾಗ ಕಾರ್ಯದರ್ಶಿ ಹಂಝ ಸಖಾಫಿ ಬೆಂಗಳೂರು, ಕೊಡಗು ಜಿಲ್ಲಾಧ್ಯಕ್ಷ ಮುಸ್ತಫಾ ಸಖಾಫಿ, ಎಸ್‍ಜೆಎಂ ಸೋಮವಾರಪೇಟೆ ರೇಂಜ್ ಅಧ್ಯಕ್ಷ ಅಬೂಬಕರ್ ಮದನಿ ಇದ್ದರು. ಎಸ್‍ವೈಎಸ್ ಕೊಡಗು ಜಿಲ್ಲಾ ಅಧ್ಯಕ್ಷ ಅಬ್ದುಲ್ಲಾ ಸಖಾಫಿ ಕೊಳಕೇರಿ ಅಧ್ಯಕ್ಷತೆ ವಹಿಸಿದ್ದರು.