ಮಡಿಕೇರಿ, ಸೆ. 23: ಅಪ್ಪಂಗಳದ ಶ್ರೀ ವಿಜಯ ವಿನಾಯಕ ಸೇವಾ ಸಮಿತಿಯ ನೂತನ ಅಧ್ಯಕ್ಷರಾಗಿ ಎನ್. ರತನ್ ಹಾಗೂ ಕಾರ್ಯದರ್ಶಿಯಾಗಿ ಜಿ. ಮಹೇಶ್ ಆಯ್ಕೆಯಾಗಿದ್ದಾರೆ.

ಅಪ್ಪಂಗಳದ ಸಂಘದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಗೌರವಾಧ್ಯಕ್ಷರಾಗಿ ಎ.ಆರ್. ಪ್ರಜಿತ್, ಉಪಾಧ್ಯಕ್ಷರಾಗಿ ಮಿಥುನ್, ಸಹ ಕಾರ್ಯದರ್ಶಿಯಾಗಿ ಜಿ. ರಘು, ಖಜಾಂಚಿಯಾಗಿ ಎನ್.ಆರ್. ಮಣಿಕಂಠ ಅವರನ್ನು ನೇಮಕ ಮಾಡಲಾಯಿತು. ಸಂಘಟನಾ ಕಾರ್ಯದರ್ಶಿಯಾಗಿ ನಂದನ್ ಪಟ್ಟಡ, ಕ್ರೀಡಾ ಕಾರ್ಯದರ್ಶಿಯಾಗಿ ಲೋಕೇಶ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಕೆ.ಎಂ. ಮಣಿಕಂಠ ಅವರನ್ನು ಆಯ್ಕೆಮಾಡಲಾಗಿದೆ.