ಸಿದ್ದಾಪುರ: ಸಿದ್ದಾಪುರದ ಜಮಾಅತೇ ಇಸ್ಲಾಮೀ ಹಿಂದ್ ಹಾಗೂ ಸಿದ್ದಾಪುರದ ಹಿರಾ ಮಸ್ಜೀದ್ ವತಿಯಿಂದ ಸಿದ್ದಾಪುರ ಪೊಲೀಸ್ ಠಾಣೆ ಹಾಗೂ ಗ್ರಾ.ಪಂ.ಗಳಿಗೆ ಸ್ಯಾನಿಟೈಸರ್ ಯಂತ್ರಗಳನ್ನು ವಿತರಿಸಲಾಯಿತು. ಈ ಸಂದರ್ಭ ಜಮಾಅತೇ ಇಸ್ಲಾಮೀ ಹಿಂದ್ ಸಂಘಟನೆಯ ಪ್ರಮುಖರಾದ ಕೆ. ಉಮ್ಮರ್ ಹಾಜಿ, ಕುಂಜ್ಞಾಣ್ ಅಶ್ರಫ್ ಇನ್ನಿತರರು ಹಾಜರಿದ್ದರು.ಕುಶಾಲನಗರ: ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಕುಶಾಲನಗರದ ಕಾವೇರಿ ಯುವಕ ಸಂಘದ ವತಿಯಿಂದ ಕುಶಾಲನಗರ ಗ್ರಾಮಾಂತರ ಠಾಣೆಗೆ ಆಟೋಮೆಟಿಕ್ ಸ್ಯಾನಿಟೈಸರ್ ಯಂತ್ರ ಕೊಡುಗೆಯಾಗಿ ನೀಡಲಾಯಿತು. ಈ ಸಂದರ್ಭ ಸಂಘದ ಅಧ್ಯಕ್ಷ ಅನೀಶ್, ಉಪಾಧ್ಯಕ್ಷ ಸುಬ್ರಮಣಿ, ಕಾರ್ಯದರ್ಶಿ ಪೆಮ್ಮಯ್ಯ ಸೇರಿದಂತೆ ಪದಾಧಿಕಾರಿಗಳು ಇದ್ದರು.ಸಿದ್ದಾಪುರ: ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಸಿದ್ದಾಪುರ ಘಟಕದ ವತಿಯಿಂದ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ 2 ನೂತನ ಸ್ಯಾನಿಟೈಸರ್ ಯಂತ್ರಗಳನ್ನು ನೀಡಲಾಯಿತು. ಈ ಸಂದರ್ಭ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ವೈದ್ಯಾಧಿಕಾರಿಗಳಾದ ಡಾ. ಕೆ.ಎನ್. ರಾಘವೇಂದ್ರ ಸ್ಯಾನಿಟೈಸರ್ ಯಂತ್ರವನ್ನು ಸ್ವೀಕರಿಸಿದರು. ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹರ್ಷಾದ್, ಕಾರ್ಯಕರ್ತರಾದ ನಿಶಾಮುದ್ದೀನ್, ರವೂಫ್ ಕಟ್ಟೆಕಾಡ್, ಹನೀಫ ಕೆ.ಪಿ., ರವೂಫ್, ದಂತ ವೈದ್ಯಾಧಿಕಾರಿ ಡಾ. ರೇವಣ್ಣ ಹಾಗೂ ಇನ್ನಿತರರು ಹಾಜರಿದ್ದರು.