ಗೋಣಿಕೊಪ್ಪಲು: ಭಾವಸಾರ್ ವಿಷನ್ ಇಂಡಿಯಾ ಹಾಗೂ ಕರ್ನಾಟಕ ಪ್ರಾಂತ್ಯ ರೈತ ಮತ್ತು ಕಾರ್ಮಿಕರ ರಕ್ಷಣಾ ವೇದಿಕೆ ಸಂಯುಕ್ತ ಆಶ್ರಯದಲ್ಲಿ ಹೈಸೊಡ್ಲೂರುವಿನ ಸುಮಾರು 40 ನಿರಾಶ್ರಿತ ಕುಟುಂಬಗಳಿಗೆ ಕಂಬಳಿ ಮತ್ತು ಮಕ್ಕಳಿಗೆ ಸ್ಲೇಟ್, ಬಳಪ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ರೈತ ಮತ್ತು ಕಾರ್ಮಿಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಜೆ. ಜವರೇಗೌಡ, ಭಾವಸಾರ್ ಮಿಷನ್ ಇಂಡಿಯಾ ಅಧ್ಯಕ್ಷ ಎನ್. ಪ್ರಕಾಶ್ ಕುಂಟೆ, ಮೈಸೂರು ಜಿಲ್ಲಾಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿ ಎಸ್. ದೇವರಾಜ್, ರಾಜ್ಯ ಉಪಾಧ್ಯಕ್ಷ ಎಂ. ಮಧು, ಕೊಡಗು ಜಿಲ್ಲಾ ಘಟಕದ ಸಂಗಡಿಗರೊಂದಿಗೆ ಆಗಮಿಸಿದ ಪಡಿಕಲ್ ಪ್ರಕಾಶ್ ಕುಂಟೆ, ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಕೊಡಗು ಜಿಲಾಧ್ಯಕ್ಷ ಕೆ.ಕೆ. ಶಶಿಕುಮಾರ್, ದ.ಸಂ.ಸ. ವಿಭಾಗೀಯ ಸಂಚಾಲಕ ಕೃಷ್ಣಪ್ಪ, ಬೆಂಗಳೂರು ನಗರಾಧ್ಯಕ್ಷ ಕೆ.ಎನ್. ನಾಗರಾಜ್, ಬಾಚಿಮಾಡ ವಾಣಿ, ಮಂಜುಳಾ, ಭಾವಸಾರ್ ವಿಷನ್ ಇಂಡಿಯಾದ ಕಾರ್ಯದರ್ಶಿ ರಾಘವೇಂದ್ರ, ರಾಜ್ಯಪಾಲ ಸುರೇಶ್ ತೆಮ್ಕರ್, ಸಿ.ಎಂ. ಸುರೇಶ್ ಶೇಕರ್, ಮಂಜುನಾಥ್ ಹಾಗೂ ಸತ್ಯನಾರಾಯಣ ಮುಂತಾದವರು ಪಾಲ್ಗೊಂಡಿದ್ದರು.ಮಡಿಕೇರಿ: ಕೂರ್ಗ್ ವೆಲ್‍ನೆಸ್ ಫೌಂಡೇಶನ್ ವತಿಯಿಂದ ತಲಕಾವೇರಿಯ 60 ಕುಟುಂಬಗಳಿಗೆ ಆಹಾರ ಕಿಟ್‍ಗಳನ್ನು ವಿತರಿಸಲಾಯಿತು. ತಲಕಾವೇರಿಯಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹ ಹಾಗೂ ಭೂ ಕುಸಿತದಿಂದ ಸಂಕಷ್ಟಕ್ಕೊಳಗಾದ ಕುಟುಂಬಗಳನ್ನು ಗುರುತಿಸಿ ಕಿಟ್‍ಗಳನ್ನು ವಿತರಿಸಲಾಯಿತು.ಪೆÇನ್ನಂಪೇಟೆ: ಎ.ಕೆ. ಸುಬ್ಬಯ್ಯ-ಪೆÇನ್ನಮ್ಮ ದತ್ತಿ ಮತ್ತು ಶೈಕ್ಷಣಿಕ ಟ್ರಸ್ಟ್ ವತಿಯಿಂದ ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದಿನಸಿ ಕಿಟ್‍ಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಟ್ರಸ್ಟಿ ಎ.ಎಸ್. ನರೇನ್ ಕಾರ್ಯಪ್ಪ ಮತ್ತು ಕಾಂಗ್ರೆಸ್ ಪ್ರಮುಖರು ಅರ್ಹ ಫಲಾನುಭವಿಗಳಿಗೆ ದಿನಸಿ ಕಿಟ್‍ಗಳನ್ನು ಅವರ ಮನೆ ಬಾಗಿಲಿಗೆ ತೆರಳಿ ವಿತರಿಸಿದರು.

ಕಾನೂರಿನಲ್ಲಿ ಕೊರೊನಾ ಸೋಂಕು ಪತ್ತೆಯಾದ ಕಾರಣ ಸೀಲ್‍ಡೌನ್‍ಗೆ ಒಳಗಾದ ಪ್ರದೇಶದ ಕಾರ್ಮಿಕರಿಗೆ ಇದೇ ಸಂದರ್ಭದಲ್ಲಿ ದಿನಸಿ ಕಿಟ್‍ಗಳನ್ನು ವಿತರಿಸಲಾಯಿತು. ಬಳಿಕ ಕೋತೂರಿನ ವಿವಿಧ ಬಡವರ್ಗದ ಫಲಾನುಭವಿಗಳಿಗೂ ದಿನಸಿ ಕಿಟ್‍ಗಳನ್ನು ನೀಡಲಾಯಿತು.

ಈ ಸಂದರ್ಭ ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕರು ಮತ್ತು ಟ್ರಸ್ಟಿ ಎ.ಎಸ್. ನರೇನ್ ಕಾರ್ಯಪ್ಪ, ಪೆÇನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮೀದೇರಿರ ನವೀನ್, ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯ ಕಾಡ್ಯಮಾಡ ಬೋಪಣ್ಣ, ಕಾನೂರು ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕುಂಜ್ಹಿಮಾಡ ರಮೇಶ್ ಮೊದಲಾದವರು ಪಾಲ್ಗೊಂಡಿದ್ದರು.