ಗೋಣಿಕೊಪ್ಪ ವರದಿ, ಸೆ. 23: ಮಾಯಮುಡಿ ಗ್ರಾಮದ ಬಿಜೆಪಿ ಕೃಷಿ ಮೋರ್ಚಾ ಆಯ್ಕೆ ಸಭೆ ತಾಲೂಕು ಕೃಷಿ ಮೋರ್ಚಾ ಖಜಾಂಚಿ ಚೆಪ್ಪುಡೀರ ಪ್ರದೀಪ್ ಪೂವಯ್ಯ ಅಧ್ಯಕ್ಷತೆಯಲ್ಲಿ ಬಿಜೆಪಿ ಶಕ್ತಿ ಕೇಂದ್ರದಲ್ಲಿ ನಡೆಯಿತು.

ಬಿ.ಆರ್. ಪ್ರಕಾಶ್ ಅವರನ್ನು ಅಧ್ಯಕ್ಷರನ್ನಾಗಿ, ಆಪಟ್ಟೀರ ಬೋಪಣ್ಣ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ, ಕೊಣಿಯಂಡ ಸಂಜು ಸೋಮಯ್ಯ, ಕೊಣಿಯಂಡ ಮಾದಯ್ಯ, ಎನ್.ಕೆ. ನಾಚಪ್ಪ, ಜೆ.ಎಂ. ದೀಪಕ್, ಎಸ್.ಆರ್. ನಿತಿನ್, ಟಿ. ಸುಕೇಶ್, ಕಾಳಪಂಡ ಸತೀಶ್, ಎನ್.ಆರ್. ಪ್ರವೀಣ್, ಎಂ.ಎಂ. ಪೂಣಚ್ಚ, ಎಸ್.ಪಿ. ಮೋಹನ್‍ಚಂದ್ರ ಅವರನ್ನು ಸಮಿತಿಗೆ ಆಯ್ಕೆ ಮಾಡಿಕೊಳ್ಳಲಾಯಿತು.

ಈ ಸಂದರ್ಭ ಮಾಯಮುಡಿ ಬಿಜೆಪಿ ಪ್ರಮುಖ್ ಆಪಟ್ಟೀರ ಸಿ. ಪ್ರದೀಪ್, ತಾಲೂಕು ಕೃಷಿ ಮೋರ್ಚಾ ಉಪಾಧ್ಯಕ್ಷ ಚಟ್ಟಮಾಡ ಅನಿಲ್, ಗುಡ್ಡಮಾಡ ಅಪ್ಪಿ, ಪ್ರಧಾನ ಕಾರ್ಯದರ್ಶಿ ತೋರೀರ ವಿನು ಇದ್ದರು.