ಗೋಣಿಕೊಪ್ಪ ವರದಿ, ಸೆ. 22: ಮಳೆಗೆ ಮನೆಯ ಗೋಡೆ ಕುಸಿದು ಗೃಹಿಣಿ ಸಾವಿಗೀಡಾದ ಘಟನೆ ಕುಟ್ಟ ಗ್ರಾಮದ ಸಿಂಕೋನ ಕಾಲೋನಿಯಲ್ಲಿ ಮಂಗಳವಾರ ಸಂಜೆ ನಡೆದಿದೆ.ಸೈನಬ ( 65) ಮೃತ ದುರ್ಧೈವಿ. ಸಂಜೆ ಬಿದ್ದ ಅತಿಯಾದ ಮಳೆಯಿಂದ ಮನೆಯ ಒಂದು ಭಾಗದ ಗೋಡೆ ಕುಸಿದು ಸ್ಥಳದಲ್ಲಿ ಸಾವಿಗೀಡಾದರು. ಈ ಬಗ್ಗೆ ಕುಟ್ಟ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಹಶೀಲ್ದಾರ್ ನಂದೀಶ್, ಶ್ರೀಮಂಗಲ ಕಂದಾಯ ನಿರೀಕ್ಷಕ ಸುಧೀಂದ್ರ ಭೇಟಿ ನೀಡಿ ಮುಂದಿನ ಕ್ರಮಕೈಗೊಂಡಿದ್ದಾರೆ.