ಮಡಿಕೇರಿ, ಸೆ. 22: ಕಿತ್ತುಹೋಗಿ ಬೀಳಲ್ಪಟ್ಟಿರುವÀ ವಿದ್ಯುತ್ ಮಾರ್ಗಗಳು, ಮುರಿದು ಬಿದ್ದಿರುವ ಅನೇಕ ಮರಗಳು, ಹಾನಿಗೊಳಗಾಗಿರುವ ಕೆರೆಗಳು ಹಾಗೂ ನಾಶವಾಗಿರುವ ಕಾಫಿ, ಏಲಕ್ಕಿ, ಬಾಳೆ, ಅಡಿಕೆ ಗಿಡಗಳು - ಇದು ಕೊಡ್ಲಿಪೇಟೆಯ ಬೆಸೂರು ಪಂಚಾಯಿತಿ ವ್ಯಾಪ್ತಿಯ ಚಿಕ್ಕಕುಂದ ಗ್ರಾಮದ ಇಂದಿನ ದುಸ್ಥಿತಿ! ಸುಮಾರು 5 ದಿನಗಳಿಂದ 5 ಕಾಡಾನೆಗಳು ಈ ಗ್ರಾಮದ ತೋಟಗಳÀಲ್ಲೇ ವಾಸ್ತವ್ಯಹೂಡಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. “ಸೆ.17 ರಿಂದ 5 ಆನೆಗಳು ಗ್ರಾಮದ ತೋಟಗಳಲ್ಲೇ ಸುತ್ತಾಡುತ್ತಿವೆ. ಈ 5 ಆನೆಗಳ ಹಿಂಡಿನಲ್ಲಿ ಒಂದು ಮರಿ ಆನೆಯೂ ಇರುವ ಸಂಶಯವಿದೆ. ಈ ಆನೆಗಳ ಹಿಂಡು ಗ್ರಾಮದ ಅನೇಕ ತೋಟಗಳಿಗೆ ನುಗ್ಗಿ ಭಾರೀ ನಷ್ಟವುಂಟುಮಾಡಿವೆ. ಇತ್ತೀಚೆಗಷ್ಟೇ ಗ್ರಾಮದಲ್ಲಿ ನೂತನ ಕೆರೆ ನಿರ್ಮಾಣ ಮಾಡಲಾಗಿತ್ತು. ಆನೆಗಳ ಹಾವಳಿಯಿಂದ ಈ ಎಲ್ಲಾ ಕೆರೆಗಳೂ ಈಗ ಕೆಸರುಮಯವಾಗಿವೆ,” ಎಂದು ಕಾಫಿ ಬೆಳೆಗಾರರಾದ ಮಂದನೆರವಂಡ ಅನೂಪ್ ಗಣಪತಿ “ಶಕ್ತಿ”ಯೊಂದಿಗೆÉ ವಿವರಿಸಿದರು. ಇವರ ತಂದೆ ಮಂದನೆರವಂಡ (ಮೊದಲ ಪುಟದಿಂದ) ಮಂದಣ್ಣ ಅವರ ತೋಟದಲ್ಲಿ ಕಳೆದ ಗುರುವಾರದಿಂದ ಆನೆಗಳು ವಾಸ್ತವ್ಯ ಹೂಡಿದ್ದು, ತೋಟದ ಕಾರ್ಮಿಕರ ಸಹಿತ ತೋಟದ ಪೈಪ್‍ಲೈನ್ ಕೆಲಸ ನಡೆಸುತ್ತಿದ್ದ ಕೆಲಸಗಾರರೂ ಆನೆಯ ಭೀತಿಯಿಂದ ಕೆಲಸಕ್ಕೆ ತೆರಳುತ್ತಿಲ್ಲವಂತೆ. ತೋಟದ ತಡೆಗೋಡೆ ಸೇರಿದಂತೆ, ತೋಟದ ಗೇಟ್, ಕೆರೆ ಹಾಗೂ ಬೆಳೆಗಳು ಸೇರಿ ಸುಮಾರು 50 ಸಾವಿರ ರೂಪಾಯಿಗಳ ನಷ್ಟವನ್ನು ಆನೆಗಳ ಕಾಟದಿಂದ ಇವರು ಅನುಭವಿಸಿದ್ದಾರೆ, ಎಂದು ‘ಶಕ್ತಿ’ಯೊಂದಿಗೆ ನೊಂದು ನುಡಿದರು.

ಆನೆಗಳು ವಾಸ್ತವ್ಯ ಹೂಡಿರುವ ಬಗ್ಗೆ ಅರಣ್ಯ ಇಲಾಖೆಯ ಸಿಬ್ಬಂದಿಗೆ ತಿಳಿಸಿದ ನಂತರ ಅರಣ್ಯ ಸಿಬ್ಬಂದಿ ಆನೆಗಳನ್ನು ಕಾಡಿಗೆ ಓಡಿಸುವ ಕಾಂiÀರ್iವನ್ನು ರಾತ್ರಿ ವೇಳೆ ನಡೆಸಿದರಾದರೂ, ಇದು ಫಲಕಾರಿಯಾಗಿಲ್ಲ ಎನ್ನುತ್ತಾರೆ ಗಣಪತಿ. “ಅರಣ್ಯ ಇಲಾಖೆ ಸಂಜೆ ಆನೆಗಳನ್ನು ಓಡಿಸುವ ಕಾರ್ಯ ಕೈಗೊಂಡರೆ, ಮುಂಜಾನೆ ಪುನಃ ಆನೆಗಳು ತೋಟಕ್ಕೆ ಮರಳಿ ಹಿಂದಿರುಗುತ್ತವೆ,” ಎನ್ನುತ್ತಾರೆ ಗಣಪತಿ. ಇನ್ನು ಇದೇ ಗ್ರಾಮದ ಲೋಕೇಶ್ ಅವರ ತೋಟದಲ್ಲಿಯೂ ಸುಮಾರು ಮೂರು ದಿನಗಳಿಂದ ಆನೆಗಳು ಬೀಡು ಬಿಟ್ಟಿದ್ದು, ತೋಟದಲ್ಲಿ ಬಹಳಷ್ಟು ಗಿಡಗಳಿಗೆ ಹಾನಿಮಾಡಿವೆ ಎಂದು ತಿಳಿಸಿದರು. ಈ ಗ್ರಾಮದಲ್ಲಿ ಕಳೆದ ಆಗಸ್ಟ್ ತಿಂಗಳಲ್ಲಿ ವಿದ್ಯುತ್ ಕಂಬಗಳಿಗೆ ಗಾಳಿ ಮಳೆಯಿಂದ ಹಾನಿಯಾಗಿದ್ದು, ಈವರೆಗೂ ಇದರ ದುರಸ್ತಿ ಕಾರ್ಯವನ್ನು ಚೆಸ್ಕಾಂ ಕೈಗೊಂಡಿಲ್ಲ ಎಂದು ಗಣಪತಿ ಆರೋಪಿಸಿದರು. “ಕೊಡ್ಲಿಪೇಟೆ ಕೊಡಗಿನಲ್ಲಿದೆಯಾದರೂ, ಈ ಗ್ರಾಮವು ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಇಲ್ಲಿ ಯಾವದೇ ಆಡಳಿತ ಕಾರ್ಯಗಳಾಗಲಿ, ಆಡಳಿತದಿಂದ ಜನರ ಗಂಭೀರ ಸಮಸ್ಯೆಗಳಿಗೆ ಸ್ಪಂದನಾ ಕಾರ್ಯಗಳಾಗಲಿ ತೀರಾ ವಿಳಂಬ ಗತಿಯಲ್ಲಿ ಸಾಗುತ್ತವೆ,” ಎಂದು ಗಣಪತಿ ಅಭಿಪ್ರಾಯಪಟ್ಟರು.

ಕಾಡಾನೆ ಕಾರ್ಯಾಚರಣೆ ಕುರಿತು “ಶಕ್ತಿ”ಯು ಶನಿವಾರಸಂತೆ ಆರ್.ಎಫ್.ಓ ಪ್ರಫುಲ್ ಶೆಟ್ಟಿಯವರನ್ನು ಪ್ರಶ್ನಿಸಿದಾಗ, ಅವರು, “ಹೌದು, ಕಾಡಾನೆಗಳು ಚಿಕ್ಕಕುಂದದಲ್ಲಿ ಬೀಡುಬಿಟ್ಟಿರುವ ಬಗ್ಗೆ ನಮಗೆ ಮಾಹಿತಿ ದೊರೆತಿದೆ. ಇದಲ್ಲದೆ, ಕೊಡ್ಲಿಪೇಟೆ ಸುತ್ತ್ತಮುತ್ತ ಮೂರು ಕಡೆಗಳಲ್ಲಿ ಮೂರು ಕಾಡಾನೆ ಗುಂಪುಗಳು ಬೀಡು ಬಿಟ್ಟಿವೆ. ಬೆಳಗ್ಗಿನ ಜಾವ ಕಾಡಾನೆಯನ್ನು ಕಾಡಿಗೆ ಅಟ್ಟುವ ಕಾರ್ಯ ಕೈಗೊಂಡರೆ ತೋಟಗಳಲ್ಲಿ ಹಾನಿ ಹೆಚ್ಚಾಗುವ ಸಾಧ್ಯತೆ ಇರುವದರಿಂದ ರಾತ್ರಿ ವೇಳೆ ಕಾರ್ಯಾಚರಣೆ ಮಾಡಲು ಯೋಜನೆ ರೂಪಿಸಿದ್ದೇವೆ. ಸದ್ಯದಲ್ಲಿಯೇ ನೀರುಗುಂದದಲ್ಲಿ ಈ ಕಾರ್ಯಾಚರಣೆಯನ್ನು ಕೈಗೊಳ್ಳುತ್ತೇವೆ,” ಎಂದರು. ಇನ್ನು, ಇಲ್ಲಿನ ಕಾಡಂಚಿನಲ್ಲಿ ಆನೆ ಕಂದಕಗಳು ನಿರ್ಮಿಸಲ್ಪಟ್ಟಿದ್ದರೂ, ಕೆಲವೊಂದು ಕಡೆಗಳಲ್ಲಿ ಈ ಕಂದಕಗಳು ಕಲ್ಲುಗಳಿಂದ ತುಂಬಿದ್ದು, ಆನೆಗಳು ಇದನ್ನು ದಾಟಿ, ಹೆಚ್ಚಾಗಿ ಹಾಸನ ಕಡೆಯಿಂದ ಬರುತ್ತಿವೆ ಎಂದರು.

-ವರದಿ: ಪ್ರಜ್ಞಾ ಜಿ.ಆರ್.