ಕುಶಾಲನಗರ, ಮಡಿಕೇರಿ: ಸೆ. 22: ಕೊಡಗು ಜಿಲ್ಲೆಯಲ್ಲಿ ನಡೆಯುತ್ತಿದ್ದ ಮಾದಕ ವಸ್ತು ದಂಧೆಯ ಜಾಲದ ಪ್ರಮುಖ ವ್ಯಕ್ತಿಯನ್ನು ಬಂಧಿಸುವಲ್ಲಿ ಜಿಲ್ಲಾ ಅಪರಾಧ ಪತ್ತೆದಳ ಯಶಸ್ವಿಯಾಗಿದೆ. ಆಗಸ್ಟ್ 28 ರ ಮುಂಜಾನೆ ಮಡಿಕೇರಿಯಲ್ಲಿ ಮಾದಕ ವಸ್ತು ಮಾರಾಟ ಜಾಲದ ಪತ್ತೆ ಕಾರ್ಯಾಚರಣೆಯಲ್ಲಿ ಕುಶಾಲನಗರದಿಂದ ಪರಾರಿಯಾಗಿದ್ದÀ ಪಶ್ಚಿಮ ಆಫ್ರಿಕಾದ ಘಾನ ದೇಶ ಎಕ್ರರಾಜ್ಯ ಕುಂಸ್ಸೆ ಗ್ರಾಮ ಮೂಲದ ಆರೋಪಿ ಒಪೊಂಗ್ ಸ್ಯಾಮ್ಸನ್ (29) ಎಂಬಾತನನ್ನು ಬೆಂಗಳೂರಿನ ಹೊರಮಾವು ಬಳಿ ಪತ್ತೆಹಚ್ಚಿ ಬಂಧಿಸಿದ್ದಾರೆ. ಇದರೊಂದಿಗೆ ದಂಧೆಯಲ್ಲಿ ಭಾಗಿಯಾಗಿದ್ದ ಆರು ಮಂದಿಯನ್ನು ಬಂಧನಕ್ಕೊಳಪಡಿಸಲಾಗಿದೆ. ಆರೋಪಿಯೊಂದಿಗೆ ಕುಶಾಲನಗರಕ್ಕೆ ಬಂದ ಜಿಲ್ಲಾ ಅಪರಾಧ ಪತ್ತೆದಳದ ಅಧಿಕಾರಿ, ಸಿಬ್ಬಂದಿಗಳ ತಂಡ ಆತ ಮತ್ತು ಇಬ್ಬರು ಮಹಿಳೆಯರು ಉಳಿದುಕೊಂಡಿದ್ದ ಮೈಸೂರು ರಸ್ತೆಯ ಹೊಟೇಲ್‍ಗೆ ಕರೆತಂದಿದ್ದು, ಮಹಜರು ನಡೆಸಿದ್ದಾರೆ. ಕಳೆದ ತಾ.28 ರಂದು ಮಡಿಕೇರಿ ರಾಜಾಸೀಟ್ ಮಾರ್ಗದಲ್ಲಿ ಮಾದಕ ವಸ್ತು ಂmಠಿeಣಚಿmiಟಿe ಡ್ರಗ್ ಮಾರಾಟ ಸಂದರ್ಭ ಮಾಹಿತಿ ಮೇರೆಗೆ ದಾಳಿ ಮಾಡಿದಾಗ ಪೊಲೀಸರು ಕಾರ್ಯಾಚರಣೆ ನಡೆಸಿ ಎರಡು ಕಾರುಗಳನ್ನು ವಶಪಡಿಸಿಕೊಂಡು ಮೂವರನ್ನು ಬಂಧಿಸಿ, ತನಿಖೆ ಮುಂದುವರಿಸಿದ್ದರು.
ಆಗಸ್ಟ್ 28 ರಂದು ನಡೆಸಿದ ಮಾದಕ ವಸ್ತು ದಂಧೆ ಕಾರ್ಯಾಚರಣೆ ಸಂದರ್ಭ ಕುಶಾಲನಗರದ ಕಡೆಗೆ ಪರಾರಿಯಾದ ವಿದೇಶಿ ವ್ಯಕ್ತಿ ಸೇರಿದಂತೆ ಮೂವರು ಕಾರನ್ನು ಸ್ಥಳೀಯ ರಸೂಲ್ ಬಡಾವಣೆಯಲ್ಲಿ ಬಿಟ್ಟು ಪರಾರಿಯಾಗಿದ್ದರು. ಪ್ರಕರಣದ ಜಾಡು ಹಿಡಿದು ಕಾರ್ಯತತ್ಪರರಾದ ಅಪರಾಧ ಪತ್ತೆ ದಳದ ಪೊಲೀಸರು ಪರಾರಿಯಾದ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಕಾರ್ಯಾಚರಣೆ ನಡೆಸಿ ತಾ. 16 ರಂದು ಓರ್ವ ಮಹಿಳೆ ಸಹಿತ ಇಬ್ಬರನ್ನು ಬಂಧಿಸಿದ್ದರು. ಚಿಕ್ಕಮಗಳೂರಿನ ತರಿಕೆರೆ ಮಹಿಳೆ ಸಾರ ಹಾಗೂ ಬೆಂಗಳೂರು ಬಾಣಸವಾಡಿಯ ಫೈಸಲ್ ಎಂಬ ಇಬ್ಬರನ್ನು ಪೊಲೀಸರು ಬಂಧಿಸಿದ್ದರು. ಇದೀಗ ಆರನೇ ಹಾಗೂ ಪ್ರಮುಖ ಆರೋಪಿಯಾಗಿರುವ ಒಪೊಂಗ್ ಸ್ಯಾಮ್ಸನ್ ಪೊಲೀಸರ ವಶವಾಗಿದ್ದು, ಅ. 5 ರ ವರೆಗೆ ಈತನನ್ನು ನ್ಯಾಯಾಂಗ ಬಂಧÀನಕ್ಕೆ ಒಪ್ಪಿಸಲಾಗಿದೆ. ಹೆಚ್ಚಿನ ತನಿಖೆ ಮುಂದುವರೆದಿದೆ.
ಈ ಹಿಂದೆ ಆಗಸ್ಟ್ 28ರ ಮುಂಜಾನೆ ಪ್ರಮುಖ ಆರೋಪಿ ಸೇರಿದಂತೆ ಮೂವರು ಪರಾರಿಯಾದ ಸಂದರ್ಭ ಮಾಹಿತಿ ತಿಳಿದ ಪೊಲೀಸರು ಕುಶಾಲನಗರ ಕೊಪ್ಪ ಗಡಿಭಾಗದಲ್ಲಿ ರಸ್ತೆ ಬಂದ್ ಮಾಡಿದ ಹಿನೆÀ್ನಲೆಯಲ್ಲಿ ಆರೋಪಿಗಳು ಕಾರನ್ನು ಸಮೀಪದ ರಸೂಲ್ ಬಡಾವಣೆಯತ್ತ ಚಾಲಿಸಿ ಕಾರನ್ನು ಬಿಟ್ಟು ಪರಾರಿಯಾಗಿದ್ದರು. ಕಾರಿನಲ್ಲಿ ಭಾರೀ ಪ್ರಮಾಣದ ಮಾದಕ ವಸ್ತು ಂmಠಿeಣಚಿmiಟಿe ಪತ್ತೆಯಾಗಿತ್ತು. ಆರೋಪಿಗಳನ್ನು ಮುಂಜಾನೆ ಮೂರು ಗಂಟೆಯಿಂದ 8 ಗಂಟೆ ತನಕ ಜಿಲ್ಲೆಯ ಗಡಿಭಾಗದ ಕೊಪ್ಪ ಆವರ್ತಿ ವ್ಯಾಪ್ತಿಯಲ್ಲಿ ಹುಡುಕಾಟದಲ್ಲಿ ತೊಡಗಿದ್ದರು. ವಿಶೇಷವೆಂದರೆ ಈ ಆರೋಪಿಗಳು ಕಾರು ಬಿಟ್ಟು ನಂತರ ಕುಶಾಲನಗರದ ಮೈಸೂರು ರಸ್ತೆಯ ಲಾಡ್ಜ್ ಒಂದರಲ್ಲಿ ಮುಂಜಾನೆ ಮೂರು ಗಂಟೆಗೆ ರೂಂ ಮಾಡಿ ತಂಗುವ ಮೂಲಕ ತಲೆತಪ್ಪಿಸಿಕೊಂಡಿದ್ದರು. ಆದಿಲ್ ಖಾನ್ ಹೆಸರಿನಲ್ಲಿ ಪ್ರಮುಖ ಆರೋಪಿ ಲಾಡ್ಜ್‍ನಲ್ಲಿ ರೂಂ ಮಾಡಿದ್ದು ಇವನೊಂದಿಗೆ ಇಬ್ಬರು ಮಹಿಳೆಯರು ಕೂಡ ಇದ್ದರು ಎನ್ನುವ ಮಾಹಿತಿ ಹೊರಬಿದ್ದಿತು. ಆಗಸ್ಟ್ 28 ರಂದು 11 ಗಂಟೆವರೆಗೆ ಲಾಡ್ಜ್‍ನಲ್ಲಿದ್ದ ಈ ತಂಡ ಪೊಲೀಸರ ಬಂಧನದ ಭೀತಿಯಿಂದ ದಿಢೀರನೆ ರೂಂ ಖಾಲಿ ಮಾಡಿ ಬೆಂಗಳೂರಿನತ್ತ ತೆರಳಿರುವುದು ಖಚಿತವಾಗಿತು. ಕೊಡಗು ಜಿಲ್ಲಾ ಅಪರಾಧ ಪತ್ತೆದಳ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಮಹಿಳೆಯನ್ನು ಸೇರಿದಂತೆ ಇಬ್ಬರನ್ನು ಬಂಧಿಸಿ ತನಿಖೆ ನಡೆಸಿದ ಸಂದರ್ಭ ಇವರೆಲ್ಲ ಲಾಡ್ಜ್‍ನ ರೂಂ ನಂ 104 ರಲ್ಲಿ ತಂಗಿದ್ದರು ಎಂದು ಗೊತ್ತಾಗಿದೆ. ಆರೋಪಿಗಳ ಕಾರ್ಯಾಚರಣೆಗೆ ವಿಶೇಷ ತಂಡ ರಚನೆಯಾಗಿದ್ದು ಕುಶಾಲನಗರದ ಲಾಡ್ಜ್‍ನಲ್ಲಿದ್ದ ಸಿಬ್ಬಂದಿಗಳು ಮಾಹಿತಿ ನೀಡಿದ ಮೇರೆಗೆ ಪೊಲೀಸರಿಗೆ ಪ್ರಕರಣದ ಕಿಂಗ್‍ಪಿನ್ ಆರೋಪಿಯ ಪತ್ತೆ ಕಾರ್ಯಕ್ಕೆ ಸಂಪೂರ್ಣ ಸಹಕಾರಿಯಾಗಿದೆ. ಈ ಹಿಂದೆ ಬಂಧಿತಳಾಗಿದ್ದ ಆರೋಪಿ ಮಹಿಳೆಯನ್ನು (ಮೊದಲ ಪುಟದಿಂದ) ಕುಶಾಲನಗರ ಮತ್ತು ಮಡಿಕೇರಿಯ ಲಾಡ್ಜ್‍ಗಳಿಗೆ ಕರೆತಂದ ಪೊಲೀಸರ ತಂಡ ಮಹಜರು ನಡೆಸಿದಾಗ ಮಹಿಳೆಯ ಗುರುತನ್ನು ಕೂಡ ಲಾಡ್ಜ್‍ನ ಸಿಬ್ಬಂದಿಗಳು ಖಚಿತಪಡಿಸಿದ್ದಾರೆ. ಈಕೆಯಿಂದ ದೊರೆತ ಮಹತ್ತರ ಸುಳಿವಿನ ಬೆನ್ನಲ್ಲೇ ಪ್ರಕರಣದ ಕಿಂಗ್‍ಪಿನ್ ಸ್ಯಾಮ್ಸನ್ ಬಂಧನವಾಗಿದ್ದು ಮಾದಕ ವಸ್ತು ದಂಧೆ ವಿರುದ್ಧ ಕೊಡಗು ಪೊಲೀಸರ ಆಪರೇಷನ್ ಡ್ರಗ್ ಕಾರ್ಯಾಚರಣೆಗೆ ಯಶಸ್ಸು ದೊರಕಿದೆ ಎನ್ನಬಹುದು.
ಪೊಲೀಸ್ ಅಧೀಕ್ಷಕರಾದ ಕ್ಷಮಾ ಮಿಶ್ರಾ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿಸಿಐಬಿ ನಿರೀಕ್ಷಕ ಎನ್. ಕುಮಾರ್ ಆರಾಧ್ಯ, ಸಬ್ ಇನ್ಸ್‍ಪೆಕ್ಟರ್ ಹೆಚ್.ವಿ. ಚಂದ್ರಶೇಖರ್, ಸಿಬ್ಬಂದಿಗಳಾದ ಎಎಸ್‍ಐ ಹಮೀದ್, ಬಿ.ಎಲ್. ಯೋಗೇಶ್ ಕುಮಾರ್, ಸುರೇಶ್, ಸಜಿ, ನಿರಂಜನ್, ವಸಂತ, ಅನಿಲ್ ಕುಮಾರ್, ವೆಂಕಟೇಶ್, ಶರತ್ ರೈ ಹಾಗೂ ಚಾಲಕ ಶಶಿಕುಮಾರ್ ಮತ್ತು ಸಿಡಿಆರ್ ಸೆಲ್‍ನ ರಾಜೇಶ್ ಹಾಗೂ ಗಿರೀಶ್ ಭಾಗವಹಿಸಿದ್ದರು. ಕೊಡಗು ಜಿಲ್ಲೆಯಲ್ಲಿ ಮಾದಕ ವ್ಯಸನಿಗಳ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿದ್ದು, ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ಗುಪ್ತವಾಗಿ ಮಾಹಿತಿ ನೀಡಿ ಮಾದಕ ವಸ್ತುಗಳ ಬಳಕೆ ಹಾಗೂ ಮಾರಾಟಕ್ಕೆ ಕಡಿವಾಣ ಹಾಕಬೇಕೆಂದು ಎಸ್ಪಿ ಕ್ಷಮಾ ಮಿಶ್ರಾ ಮನವಿ ಮಾಡಿದ್ದಾರೆ. -ವರದಿ: ಚಂದ್ರಮೋಹನ್, ಸಂತೋಷ್