ಶ್ರೀಮಂಗಲ, ಸೆ. 23: ಪೌರಾಣಿಕ ಹಿನೆÀ್ನಲೆಯುಳ್ಳ ಹರಿಹರ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮುಖ್ಯರಸ್ತೆಯ ಸಮೀಪದಲ್ಲಿ ದಾನಿಗಳ ಸಹಕಾರ ದಿಂದ 2 ಲಕ್ಷರೂ. ವೆಚ್ಚದಲ್ಲಿ ಮಹಾದ್ವಾರದ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು.
ತಾವಳಗೇರಿಯ ನಿವಾಸಿ ಕೈಬಿಲೀರ ಪಾರ್ವತಿ ಬೋಪಯ್ಯ ಅವರು ತಮ್ಮ ಪತಿ ಮಾಜಿ ಸೈನಿಕ ಹಾಗೂ ತಾವಳಗೇರಿ ಮೂಂದ್ ನಾಡ್ನ ಮಾಜಿ ನಾಡ್ತಕ್ಕರಾದ ಕೈಬಿಲೀರ ದಿ. ಎಂ.ಬೋಪಯ್ಯ ಅವರ ಜ್ಞಾಪಕಾರ್ಥವಾಗಿ ಮಹಾದ್ವಾರ ನಿರ್ಮಾಣಕ್ಕೆ ದೇಣಿಗೆ ನೀಡಿದ್ದು ದೇವಸ್ಥಾನದ ತಕ್ಕ ಮುಖ್ಯಸ್ಥರು ಹಾಗೂ ಅಧ್ಯಕ್ಷ ಆಡಳಿತ ಮಂಡಳಿಯ ಸಮ್ಮುಖದಲ್ಲಿ ಭೂಮಿ ಪೂಜೆ ನೆರವೇರಿಸಲಾಯಿತು. ಸುಬ್ರಹ್ಮಣ್ಯ ಷಷ್ಠಿ ಹಬ್ಬಕ್ಕೆ ಮುಂಚಿತವಾಗಿ ನಿರ್ಮಾಣ ಕಾರ್ಯ ಪೂರ್ಣಗೊಳಿಸಿ ಮಹಾ ದ್ವಾರದ ಉದ್ಘಾಟನೆ ನೆರವೇರಿಸುವಂತೆ ನಿರ್ಣಯಿಸಲಾಯಿತು. ಈ ಸಂದರ್ಭ ದಾನಿಗಳಾದ ಪಾರ್ವತಿ ಅವರ ಸೇವಾ ಮನೋಭಾವವನ್ನು ನೆರೆದವರು ಶ್ಲಾಘಿಸಿದರು.
ಭೂಮಿಪೂಜೆಯಲ್ಲಿ ದಾನಿಗಳಾದ ಕೈಬಿಲೀರ ಪಾರ್ವತಿ ಬೋಪಯ್ಯ, ತಕ್ಕ ಮುಖ್ಯಸ್ಥರಾದ ಚಿಮ್ಮುಣೀರ ಮುತ್ತಪ್ಪ, ದೇವಸ್ಥಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಮಹಾದ್ವಾರ ನಿರ್ಮಾಣ ಉಸ್ತುವಾರಿ ಮನ್ನೇರ ಎ. ರಮೇಶ್, ದೇವಸ್ಥಾನ ಸಮಿತಿ ಸದಸ್ಯರಾದ ಪೆಮ್ಮಣಮಾಡ ಮುರುಳಿ, ಪೆಮ್ಮಣಮಾಡ ಸಂಪತ್, ಮುಕ್ಕಾಟೀರ ಶುಭ, ಚಿಂಡಮಾಡ ರಮೇಶ್, ತೀತಿರ ಸೋಮಣ್ಣ, ಬಾಚೀರ ರಾಜ ಉತ್ತಪ್ಪ, ಪೆಮ್ಮಣಮಾಡ ಮನು, ಮರಡ ದೇವಯ್ಯ, ನಾಗವಂಡ ರಮೇಶ್, ಬಾಚೀರ ಲಾಲ, ತೀತಿರ ರವಿ, ಕೆ.ಎಸ್. ಉಮೇಶ್ ಮತ್ತಿತರರು ಭಾಗವಹಿಸಿದ್ದರು.