ಮಡಿಕೇರಿ, ಸೆ. 22: ಕೊಣಂಜಗೇರಿ ಗ್ರಾಮ ಪಂಚಾಯಿತಿಯ 2019-20ನೇ ಸಾಲಿನ ವಾರ್ಷಿಕ ಜಮಾಬಂದಿ ಸಭೆಯನ್ನು ತಾ. 23 ರಂದು (ಇಂದು) ಪೂರ್ವಾಹ್ನ 10.30 ಗಂಟೆಗೆ ಕೊಣಂಜಗೇರಿ ಗ್ರಾಮ ಪಂಚಾಯಿತಿ ಆಡಳಿತ ಅಧಿಕಾರಿ ನಿಲೇಶ್ ಶಿಂಧೆ ದೇವಬಾ (ಭಾ.ಅ.ಸೇ.)ಇವರ ಅಧ್ಯಕ್ಷತೆಯಲ್ಲಿ ಹಾಗೂ ಗ್ರಾಮ ಪಂಚಾಯಿತಿ ಜಮಾಬಂದಿಯ ನೋಡೆಲ್ ಅಧಿಕಾರಿ ಕೃತಿಕಾ, ಸಹಾಯಕ ಅಭಿಯಂತರರು ಗ್ರಾ.ಕು.ನೀ. ಮತ್ತು ನೈರ್ಮಲ್ಯ ಇಲಾಖೆ ಇವರ ಉಪಸ್ಥಿತಿಯಲ್ಲಿ ನಡೆಸಲಾಗುವುದು.