ಶ್ರೀಮಂಗಲ, ಸೆ. 22: ಶ್ರೀಮಂಗಲ ವಿದ್ಯುತ್ ಸರಬರಾಜು ಕೇಂದ್ರದಿಂದ ಮುಂದುವರೆದ 11 ಕೆ.ವಿ. ವಿದ್ಯುತ್ ಮಾರ್ಗ ಕೆ.ಕೆ.ಆರ್ ನಿಂದ ತೆರಾಲು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರೂ.12.38 ಲಕ್ಷ ವೆಚ್ಚದಲ್ಲಿ ಮಂಜೂರಾಗಿರುವ ಹೊಸ ವಿದ್ಯುತ್ ಸಂಪರ್ಕ ಮಾರ್ಗದ ಕಾಮಗಾರಿಗೆ ಗ್ರಾಮಸ್ಥರು ಭೂಮಿ ಪೂಜೆ ಸಲ್ಲಿಸಿದರು.
ಇದುವರೆಗೆ ತೆರಾಲು ಗ್ರಾಮಕ್ಕೆ ಶ್ರೀಮಂಗಲ-ಬಿರುನಾಣಿ 11 ಕೆ.ವಿ. ವಿದ್ಯುತ್ ಮಾರ್ಗದ ಬಾಡಗರಕೇರಿ ಯಿಂದ ಸಂಪರ್ಕ ನೀಡಲಾಗುತ್ತಿತ್ತು. ಇದರಿಂದ ಗ್ರಾಮಕ್ಕೆ ವಿದ್ಯುತ್ ಅಡಚಣೆ ಉಂಟಾಗುತ್ತಿತ್ತು. ಈ ಹಿನೆÀ್ನಲೆ ನೂತನ ಮಾರ್ಗಕ್ಕೆ ಗ್ರಾಮಸ್ಥರು ಕಳೆದ 5-6 ವರ್ಷಗಳಿಂದ ಪ್ರಯತ್ನಿಸಿ ಈಗ ಸಫಲರಾಗಿದ್ದಾರೆ ಎಂದು ಗ್ರಾಮದ ಬೊಟ್ಟಂಗಡ ಗಿರೀಶ್ ವಿವರಿಸಿದರು. ತಾ.28 ರಿಂದ ಕಾಮಗಾರಿ ಆರಂಭವಾಗಲಿದೆ ಎಂದು ಗಿರೀಶ್ ತಿಳಿಸಿದರು.
ಈ ಸಂದರ್ಭ ಗ್ರಾಮಸ್ಥರಾದ ಬೊಳ್ಳೇರ ಮುತ್ತಣ್ಣ, ಬೊಜ್ಜಂಗಡ ನಂದ, ಸಂಪತ್, ಬಲ್ಯಮಿದೇರಿರ ರಾಜ ಅವರು ಹಾಜರಿದ್ದರು.