ಮಡಿಕೇರಿ, ಸೆ. 22: ಕಾಫಿ ಮಂಡಳಿಯ ಕಾರ್ಯದರ್ಶಿ ಸ್ಥಾನ ಮತ್ತೆ ಬದಲಾವಣೆಯಾಗಿದ್ದು, ನೂತನ ಅಧಿಕಾರಿಯಾಗಿ ಕೆ.ಜಿ. ಜಗದೀಶ್ ಅವರು ನಿಯುಕ್ತಿಗೊಂಡಿದ್ದಾರೆ. ಐ.ಎ.ಎಸ್. ಅಧಿಕಾರಿಯಾಗಿರುವ ಜಗದೀಶ್ ಅವರು ಪ್ರಸ್ತುತ ಬೆಂಗಳೂರಿನಲ್ಲಿ ಕರ್ನಾಟಕ ಸರಕಾರದ ಡಿಪಾರ್ಟ್‍ಮೆಂಟ್ ಪಬ್ಲಿಕ್ ಇನ್ಸ್‍ಟ್ರಕ್ಷನ್‍ನಲ್ಲಿ ಆಯುಕ್ತರಾಗಿದ್ದು, ಇದೀಗ ಕಾಫಿ ಮಂಡಳಿಗೆ ನೇಮಕ ಮಾಡಲಾಗಿದೆ.