ಮಡಿಕೇರಿ, ಸೆ. 22: ಕೊಡಗಿನ ಕುಲಮಾತೆ ಕಾವೇರಿ ತೀರ್ಥೋದ್ಭವ ಅಕ್ಟೋಬರ್ 17 ರ ಬೆಳಿಗ್ಗೆ 7 ಗಂಟೆ 3 ನಿಮಿಷಕ್ಕೆ ಸಲ್ಲುವ ಕನ್ಯಾ ಲಗ್ನದಲ್ಲಿ ಜರುಗಲಿದೆ.ಕಾವೇರಿ ತುಲಾ ಸಂಕ್ರಮಣ ಸಂಬಂಧ ಈ ತಿಂಗಳ ತಾ. 26 ರಂದು ಬೆಳಿಗ್ಗೆ 8.31ಕ್ಕೆ ಪತ್ತಾಯಕ್ಕೆ ಅಕ್ಕಿ ಹಾಕುವದು, ಅ. 4 ರಂದು ಬೆಳಿಗ್ಗೆ 10.33ಕ್ಕೆ ವೃಶ್ಚಿಕ ಲಗ್ನದಲ್ಲಿ ಆಜ್ಞಾ ಮುಹೂರ್ತ, ಅ. 14 ರಂದು ಬೆಳಿಗ್ಗೆ 11.45ಕ್ಕೆ ಸಲ್ಲುವ ಧನುರ್ ಲಗ್ನದಲ್ಲಿ ಅಕ್ಷಯಪಾತ್ರೆ ಇರಿಸುವದು, ಅದೇ ದಿನ ಸಂಜೆ 5.15ಕ್ಕೆ ಸಲ್ಲುವ ಮೀನಾ ಲಗ್ನದಲ್ಲಿ ಕಾಣಿಕೆ ಡಬ್ಬಿಗಳನ್ನು ಇರಿಸುವ ಕಾರ್ಯಗಳು ನೆರವೇರಲಿದ್ದು, ಅ. 17 ರಂದು ಬೆಳಿಗ್ಗೆ 7 ಗಂಟೆ 3 ನಿಮಿಷಕ್ಕೆ ಪವಿತ್ರ ತೀರ್ಥೋದ್ಭವ ನಡೆಯಲಿದೆ ಎಂದು ಹಿಂದೂ ಧಾರ್ಮಿಕ ದತ್ತಿ ಇಲಾಖೆ ಪ್ರಕಟಣೆ ತಿಳಿಸಿದೆ. -ಸುನಿಲ್