ಮಡಿಕೇರಿ, ಸೆ. 21: ಇತ್ತೀಚಿನ ದಿನಗಳಲ್ಲಿ ಪೆÇಲೀಸ್ ಅಧಿಕಾರಿಗಳ ಫೇಸ್ಬುಕ್ ಖಾತೆಗಳಿಂದ ಸಮವಸ್ತ್ರದಲ್ಲಿರುವ ಭಾವಚಿತ್ರಗಳನ್ನು ಡೌನ್ಲೋಡ್ ಮಾಡಿಕೊಂಡು ಪೆÇಲೀಸ್ ಅಧಿಕಾರಿಯ ಹೆಸರು, ಸಮವಸ್ತ್ರದಲ್ಲಿರುವ ಭಾವಚಿತ್ರವನ್ನು ಬಳಸಿ ನಕಲಿ ಖಾತೆ ತೆರೆದು, ಅಸಲಿ ಖಾತೆಯಲ್ಲಿರುವ ಫೇಸ್ಬುಕ್‍ದಾರರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಿದ್ದು, ಇಂತಹ ನಕಲಿ ಖಾತೆಯ ಸತ್ಯಾಸತ್ಯತೆ ಅರಿಯದ ಫೇಸ್ಬುಕ್ ಬಳಕೆದಾರರು ರಿಕ್ವೆಸ್ಟ್ ಸ್ವೀಕರಿಸಿ ಸ್ನೇಹಿತರಾಗುತ್ತಾರೆ. ತದ ನಂತರದಲ್ಲಿ messeಟಿgeಡಿ ಮೂಲಕ ಆರ್ಥಿಕ ಸಂಕಷ್ಟದಲ್ಲಿರುವಂತೆ ಭಾವನಾತ್ಮಕ ಸಂದೇಶ ಕಳುಹಿಸಿ ತಕ್ಷಣ ಹಣ ವರ್ಗಾಯಿಸುವಂತೆ ಕೋರಿ, ಮರಳಿ ನೀಡುವುದಾಗಿ ಭರವಸೆ ನೀಡಿ ಹಣ ಪಡೆದು ನಂತರ ವಂಚಿಸುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿವೆ. ಆದರೆ ಯಾವುದೇ ಸಂದರ್ಭದಲ್ಲಿಯೂ ಸಹ ಪೆÇಲೀಸ್ ಅಧಿಕಾರಿಗಳು ಈ ರೀತಿಯಲ್ಲಿ ಹಣವನ್ನು ಕೇಳುವುದಿಲ್ಲ.
ಆದ್ದರಿಂದ ಈ ರೀತಿ ವಂಚಿಸುವ ಸೈಬರ್ ವಂಚಕರ ಬಗ್ಗೆ ಫೇಸ್ಬುಕ್ ಹಾಗೂ ಯಾವುದೇ ಸಾಮಾಜಿಕ ಜಾಲತಾಣದ ಬಳಕೆದಾರರು ಎಚ್ಚರಿಕೆ ವಹಿಸಬೇಕು. ಸಾಮಾಜಿಕ ಜಾಲತಾಣದ ಮೂಲಕ ಯಾವುದೇ ವ್ಯವಹಾರಗಳನ್ನು ನಡೆಸುವ ಸಂದರ್ಭದಲ್ಲಿ ಸತ್ಯಾಸತ್ಯತೆಯನ್ನು ತಿಳಿದುಕೊಂಡು ವ್ಯವಹರಿಸುವಂತೆಯೂ ಹಾಗೂ ಸತ್ಯಾಸತ್ಯತ್ಯೆಯನ್ನು ಅರಿಯದೆ ಯಾವುದೇ ಕಾರಣಕ್ಕೂ ಹಣ ವರ್ಗಾಯಿಸಿದಲ್ಲಿ ವಂಚನೆಗೊಳ ಗಾಗಬೇಕಾಗುತ್ತದೆ. ಆದ್ದರಿಂದ ಸಾಮಾಜಿಕ ಜಾಲತಾಣವನ್ನು ಬಳಸುವ ಪ್ರತಿಯೊಬ್ಬರೂ ಸಹ ಅತ್ಯಂತ ಜಾಗರೂಕತೆ ವಹಿಸಬೇಕು ಎಂದು ಕೊಡಗು ಜಿಲ್ಲಾ ಪೊಲೀಸ್ ಪ್ರಕಟಣೆ ತಿಳಿಸಿದೆ.