ಮಡಿಕೇರಿ, ಸೆ. 21: ರಾಷ್ಟ್ರದ ಪ್ರಧಾನಿ ನರೇಂದ್ರ ಮೋದಿ ಅವರ 70ನೇ ಹುಟ್ಟು ಹಬ್ಬದ ಪ್ರಯುಕ್ತ ಬಿಜೆಪಿ ಪಕ್ಷ ಹಾಗೂ ವಿವಿಧ ಮೋರ್ಚಾ ವತಿಯಿಂದ ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗಿದೆ.ಪೆÇನ್ನಂಪೇಟೆ: ನರೇಂದ್ರ ಮೋದಿಯವರ 70ನೇ ಹುಟ್ಟುಹಬ್ಬವನ್ನು ಬಿಟ್ಟಂಗಾಲ ಸಮೀಪದ ವಿ. ಬಾಡಗದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.

ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ವಿ. ಬಾಡಗದ ಶ್ರೀ ಮಹಾವಿಷ್ಣು ದೇವಸ್ಥಾನದ ಆವರಣದಲ್ಲಿ ಆರಂಭದಲ್ಲಿ ನಡೆದ ಕಾರ್ಯಕ್ರಮವನ್ನು ವೀರಾಜಪೇಟೆ ತಾಲೂಕು ಬಿಜೆಪಿ ಕಾರ್ಯದರ್ಶಿಗಳಾದ ಅಮ್ಮುಣಿಚಂಡ ರಂಜಿ ಪೂಣಚ್ಚ ಗಿಡ ನೆಡುವುದರ ಮೂಲಕ ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಜೆಪಿ ಶಕ್ತಿ ಕೇಂದ್ರದ ಸಹ ಪ್ರಮುಖ್ ಕುಪ್ಪಂಡ ದಿಲನ್ ಬೋಪಣ್ಣ, ಸ್ಥಳೀಯ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ವಿ. ಬಾಡಗದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಈ ಪೈಕಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಮೊದಲ ಆದ್ಯತೆ ನೀಡಲಾಗಿದೆ ಎಂದರು.

ಗ್ರಾಮ ಸ್ವಚ್ಛತಾ ಯೋಜನೆಯ ಅಂಗವಾಗಿ ದಿನವಿಡೀ ನಡೆದ ಕಾರ್ಯಕ್ರಮದಲ್ಲಿ ವಿ.ಬಾಡಗದ ಶ್ರೀ ಮಹಾವಿಷ್ಣು ದೇವಸ್ಥಾನ ಮತ್ತು ಶ್ರೀ ಕಮ್ಮರಟಪ್ಪ ಕುದುರೆ ಪುಂಡ ಅಂಬಲದ ಆವರಣವನ್ನು ಗ್ರಾಮದ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಸ್ಥಳೀಯ ಬಿಜೆಪಿ ಪ್ರಮುಖರಾದ ಕೊಂಗಂಡ ಅಚ್ಚಯ್ಯ, ಕೊಂಗಂಡ ಅರುಣ್ ಮೇದಪ್ಪ, ನಂಬುಡುಮಾಡ ಮುದ್ದಪ್ಪ, ಕೋಲತಂಡ ಸುಬ್ರಮಣಿ, ವಿ. ಬಾಡಗ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಕುಪ್ಪಂಡ ಮೋಹನ್, ಕಾರ್ಯದರ್ಶಿ ತೀತಿಮಾಡ ಬೋಪಣ್ಣ, ವಿ. ಬಾಡಗ ಪೆÇವ್ವಧಿ ಮಹಿಳಾ ಸಮಾಜದ ಅಧ್ಯಕ್ಷರಾದ ಅಮ್ಮುಣಿಚಂಡ ಪರ್ಲ್ ಮುತ್ತಮ್ಮ, ಕಾರ್ಯದರ್ಶಿ ಅಮ್ಮೆಕಂಡ ಜನಿತ ಸುಬ್ರಮಣಿ ಮೊದಲಾದವರು ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಪೆÇವ್ವಧಿ ಮಹಿಳಾ ಸಮಾಜ, ಶ್ರೀ ಮಹಾವಿಷ್ಣು ದೇವಾಲಯ, ಸ್ಥಳೀಯ ಸ್ತ್ರೀಶಕ್ತಿ ಮತ್ತು ಸ್ವಸಹಾಯ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.

ನಾಪೋಕ್ಲು: ಪ್ರಧಾನಮಂತ್ರಿ ನರೇಂದ್ರ ಮೋದಿಯವರ 70ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಸಮೀಪದ ಚೆಯ್ಯಂಡಾಣೆಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಜೆಪಿ ಶಕ್ತಿಕೇಂದ್ರದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಚೆಯ್ಯಂಡಾಣೆ ಶಕ್ತಿ ಕೇಂದ್ರದ ಅಧ್ಯಕ್ಷ ಪೊಕ್ಕೋಳಂಡ್ರ ದನೋಜ್ ಹಾಗೂ ಉಪಾಧ್ಯಕ್ಷ ಬಾಚಮಂಡ ಲೋಕೇಶ್ ಚಾಲನೆ ನೀಡಿದರು. ಈ ಸಂದರ್ಭ ತಾಲೂಕು ಗ್ರಾಮಾಂತರ ಯುವ ಮೋರ್ಚಾ ಸದಸ್ಯ ಪವನ್ ತೋಟಂಬೈಲ್, ಸ್ಥಾನೀಯ ಸಮಿತಿ ಸದಸ್ಯ ಬಿಳಿಯಂಡ್ರ ರತೀಶ್ ಕುಮಾರ್, ಪಕ್ಷದ ಕಾರ್ಯಕರ್ತರಾದ ಚೆಯ್ಯಂಡ ಪೂಣಚ್ಚ, ಬೊವ್ವೇರಿಯಂಡ ಲವಕುಮಾರ್, ಬಟ್ಟಿಯಂಡ ಜಯರಾಮ್, ಮುಡ್ಯೋಳಂಡ ಸದ, ಚೇಲಾವರ ಬೂತ್ ಅಧ್ಯಕ್ಷ ಕುಟ್ಟನ ರವಿ ರಾಧಾಕೃಷ್ಣ, ಬೊವ್ವೇರಿಯಂಡ ಶಾಬ್, ಬಾಚಮಂಡ ಸುಬ್ರಮಣಿ ಮತ್ತಿತರರು ಇದ್ದರು.

ವೀರಾಜಪೇಟೆ: ನರೇಂದ್ರ ಮೋದಿ ಜನ್ಮ ದಿನಾಚರಣೆಯನ್ನು ಸ್ವಚ್ಛತಾ ಕಾರ್ಯ ಮತ್ತು ವಿವಿಧ ಬಗೆಯ ಸಸಿಗಳನ್ನು ನೆಡುವ ಮೂಲಕ ಆಚರಿಸಲಾಯಿತು.

ವೀರಾಜಪೇಟೆ ತಾಲೂಕಿನ ಮಗ್ಗುಲ ಗ್ರಾಮದಲ್ಲಿ ಸ್ಥಳೀಯ ಭಾ.ಜ.ಪ. ಸಮಿತಿಯ ವತಿಯಿಂದ ಮುಖಂಡ ಪುಲಿಯಂಡ ಪೊನ್ನಣ್ಣ ಅವರ ನೇತೃತ್ವದಲ್ಲಿ ಸಂಗಡಿಗರೊಂದಿಗೆ ಸ್ವಚ್ಛತಾ ಕಾರ್ಯ ಮತ್ತು ಗ್ರಾಮದ ವಿವಿಧ ಭಾಗಗಳಲ್ಲಿ ವಿವಿಧ ಜಾತಿಯ ಸಸಿಗಳನ್ನು ನೆಡುವ ಮೂಲಕ ಆಚರಿಸಲಾಯಿತು.

ಮಗ್ಗುಲ ಗ್ರಾಮದ ಸ್ಥಳಗಳನ್ನು ಗುರುತಿಸಿ ಕಾಡು ಗಿಡಗಂಟಿಗಳ ಕಡಿದು ಸ್ವಚ್ಛಗೊಳಿಸಲಾಯಿತು. ಅಲ್ಲದೆ ಗಿಡ ಬೆಳೆಸಿ ಪ್ರಕೃತಿ ಉಳಿಸಿ ಎಂಬ ನಾಣ್ನುಡಿಯಂತೆ ವಿವಿಧÀ ತಳಿಗಳ ಸಸಿಗಳನ್ನು ನೆಡಲಾಯಿತು.

ಈ ಸಂದರ್ಭ ಭಾಗಿಗಳಾದ ಎಲ್ಲರಿಗೂ ಸಿಹಿ ಹಂಚಿ ಪ್ರಧಾನಿಗಳ ಉನ್ನತಿ ಮತ್ತು ದೀರ್ಘವಾದ ಆರೋಗ್ಯಕ್ಕೆ ಪ್ರಾರ್ಥನೆ ಸಲ್ಲಿಸಲಾಯಿತು. ಸ್ವಚ್ಛತಾ ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡರು ಸೇರಿದಂತೆ ಸಮಿತಿಯ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.

ಸೋಮವಾರಪೇಟೆ: ಸೇವಾ ಸಪ್ತಾಹದ ಪ್ರಯುಕ್ತ ಸೋಮವಾರಪೇಟೆಯ ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.

ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಆಸ್ಪತ್ರೆಗೆ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿರುವ ಮಂದಿಗೆ ಹಣ್ಣು ಹಂಪಲು ವಿತರಿಸಿ, ಶೀಘ್ರ ಚೇತರಿಕೆಗೆ ಹಾರೈಸಿದರು. ಈ ಸಂದರ್ಭ ಮಾತನಾಡಿದ ಶಾಸಕ ರಂಜನ್, ದೇಶದ ಪ್ರಧಾನಿ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಸೂಚನೆಯ ಮೇರೆಗೆ ಒಂದು ವಾರಗಳ ಕಾಲ ಸೇವಾ ಸಪ್ತಾಹ ಆಚರಿಸಲಾಗುತ್ತಿದೆ. ಪ್ರತಿದಿನ ಬಿಜೆಪಿ ಕಾರ್ಯಕರ್ತರು ಸೇವಾ ಕಾರ್ಯಗಳನ್ನು ಕೈಗೊಳ್ಳಲಿದ್ದಾರೆ ಎಂದರು.

ಬಿಜೆಪಿ ತಾಲೂಕು ಅಧ್ಯಕ್ಷ ಮನುಕುಮಾರ್ ರೈ, ಜಿ.ಪಂ. ಸದಸ್ಯ ಬಿ.ಜೆ. ದೀಪಕ್, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಕೆ. ಮಾದಪ್ಪ, ಸಪ್ತಾಹದ ಸಂಚಾಲಕ ಅಮೃತ್ ರಾಜ್, ಸಹ ಸಂಚಾಲಕ ಮೋಕ್ಷಿತ್ ರಾಜ್, ಪ್ರಮುಖರಾದ ಕೆ.ಜಿ. ಮನು, ಕೃಷ್ಣಪ್ಪ, ಉಷಾ ತೇಜಸ್ವಿ, ಪಿ.ಕೆ. ಚಂದ್ರು, ಬಿ.ಆರ್. ಮಹೇಶ್, ಆಸ್ಪತ್ರೆಯ ವೈದ್ಯಾಧಿಕಾರಿ ಶಿವ ಪಸಾದ್ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.ನಾಪೆÉÇೀಕ್ಲು: ಇಲ್ಲಿನ ಬಿ.ಜೆ.ಪಿ. ಶಕ್ತಿ ಕೇಂದ್ರದ ಪದಾಧಿಕಾರಿಗಳು ಪ್ರಧಾನಿ ನರೇಂದ್ರ ಮೋದಿಯವರ 70ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮೈದಾನದ ಸುತ್ತುಲು ಕಾಡು ಕಡಿದು ಸ್ವಚ್ಛಗೊಳಿಸಿ ಸಿಹಿ ಹಂಚಿದರು. ಸರಕಾರಿ ಶಾಲೆಯ ಮೈದಾನವು ಗಿಡಗಂಟಿಗಳಿಂದ ತುಂಬಿದ್ದು ಅಶುಚಿತ್ವದಿಂದ ಕೂಡಿರುವುದನ್ನು ಮನಗಂಡ ಬಿ.ಜೆ.ಪಿ.ಯ ಶಕ್ತಿ ಕೇಂದ್ರದ ನೂತನ ಪದಾಧಿಕಾರಿಗಳು ನೂರಾರು ಸಂಖ್ಯೆಯಲ್ಲಿ ಸ್ವಚ್ಛತೆಯಲ್ಲಿ ಪಾಲ್ಗೊಂಡು ಶ್ರಮದಾನ ಮಾಡಿದರು.

ಈ ಸಂದರ್ಭ ನೂತನ ಶಕ್ತಿ ಕೇಂದ್ರದ ಅಧ್ಯಕ್ಷ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಉಪಾಧ್ಯಕ್ಷ ಕೆಲೇಟೀರ ದೀಪು ದೇವಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯ ಮುರುಳೀಧರ್ ಕರುಂಬಮ್ಮಯ್ಯ, ಡಿ.ಸಿ.ಸಿ. ಬ್ಯಾಂಕ್ ಉಪಾಧ್ಯಕ್ಷ ಕೆಟೋಳಿರ ಹರೀಶ್ ಪೂವಯ್ಯ, ರೈತ ಮೋರ್ಚಾದ ಶಿವಚಾಳಿಯಂಡ ಜಗದೀಶ್, ಮತ್ತಿತರರು ಇದ್ದರು.

ಗೋಣಿಕೊಪ್ಪಲು: ದೇಶದ ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನದ ಅಂಗವಾಗಿ ಗೋಣಿಕೊಪ್ಪಲುವಿನ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಬಿಜೆಪಿ ಒಬಿಸಿ ಮೋರ್ಚಾದ ನಗರ ಅಧ್ಯಕ್ಷ ಬಿ.ಪಿ. ಸುಭಾಶ್ ಮುಂದಾಳತ್ವದಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು. ಶಾಲೆಯ ಆವರಣದಲ್ಲಿ ಬೆಳೆದು ನಿಂತಿದ್ದ ಗಿಡಗಂಟಿಗಳನ್ನು ಸಂಪೂರ್ಣವಾಗಿ ತೆಗೆಯುವ ಮೂಲಕ ಸ್ವಚ್ಛತಾ ಕಾರ್ಯ ಮಾಡಿದರು.

ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಪ್ರಧಾನಿಗಳ ಹುಟ್ಟುಹಬ್ಬದ ನೆನಪಿನಲ್ಲಿ ಅನೇಕ ಕಾರ್ಯಕ್ರಮಗಳು ನಡೆಯುತ್ತಿದೆ. ಕ್ಷೇತ್ರದಲ್ಲಿ ಬಿಜೆಪಿಯ ವಿವಿಧ ಮೋರ್ಚಗಳು ಮೋದಿಯವರ ಹುಟ್ಟು ಹಬ್ಬದ ಪ್ರಯುಕ್ತ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ ಎಂದರು.

ಈ ಸಂದರ್ಭ ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ,ತಾಲೂಕು ಅಧ್ಯಕ್ಷ ನೆಲ್ಲೀರ ಚಲನ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರುಣ್ ಭೀಮಯ್ಯ, ತಾಲೂಕು ಅಕ್ರಮ-ಸಕ್ರಮ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ಬಿಜೆಪಿ ತಾಲೂಕು ಅಧ್ಯಕ್ಷ ಕೆ. ರಾಜೇಶ್, ಉಪಾಧ್ಯಕ್ಷ ಎಂ.ಎಸ್. ಸುಬ್ರಮಣಿ ಹಾಗೂ ಸದಸ್ಯರು ಇದ್ದರು.

ಭಾಗಮಂಡಲ: ಚೇರಂಬಾಣೆಯಲ್ಲಿ ಬಿ.ಜೆ.ಪಿ. ವತಿಯಿಂದ ನರೇಂದ್ರ ಮೋದಿ ಜನ್ಮ ದಿನದ ಸೇವಾ ಕಾರ್ಯವಾಗಿ ಚೇರಂಬಾಣೆ ಜಿ.ಎಂ.ಪಿ. ಶಾಲೆಯ ಮೈದಾನದಲ್ಲಿ ಇದ್ದ ಕಾಡು ಕಡಿದು ಸ್ವಚ್ಛಗೊಳಿಸಲಾಯಿತು.

ಈ ಸಂದರ್ಭ ಚೇರಂಬಾಣೆ ಶಕ್ತಿ ಕೇಂದ್ರದ ಪ್ರಮುಖ್ ಬಾಚರಣಿಯಂಡ ಸುಮನ್, ಸಹ ಪ್ರಮುಖ್ ಕೂರನ ಮೋಹನ್, ಹಿರಿಯ ಕಾರ್ಯಕರ್ತ ಪೆÇಡೊನೊಳನ ರಮೇಶ್, ಸುಬ್ಬಯ್ಯ, ಅಶೋಕ್, ರಾಜಪ್ಪ, ಸಂತೋಷ್, ಮಿತ್ರ ಚಂಗಪ್ಪ, ಚೇತಕ್, ಬೆಳ್ಳಿಯಪ್ಪ, ಸಂಜು, ಕಿಶೋರ್ ಮತ್ತು ಇತರ ಕಾರ್ಯಕರ್ತರು ಭಾಗವಹಿಸಿದ್ದರು.

ಸುಂಟಿಕೊಪ್ಪ: ಸುಂಟಿಕೊಪ್ಪ ನಗರ ಬಿಜೆಪಿ ಹಾಗೂ ಯುವ ಮೋರ್ಚಾ ವತಿಯಿಂದ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಪ್ರಯುಕ್ತ ಸಿಹಿ ತಿಂಡಿಯನ್ನು ವಿತರಿಸಲಾಯಿತು.

ನರೇಂದ್ರ ಮೋದಿ ಅವರ ಜನ್ಮದಿನವನ್ನು ಬಿಜೆಪಿ ಕಾರ್ಯಕರ್ತರು ಒಗ್ಗೂಡಿ ಪಟ್ಟಣದ ಅಂಗಡಿ ಮುಗ್ಗಟ್ಟು, ಸ್ವಸ್ಥ ಶಾಲೆ, ಸುಂಟಿಕೊಪ್ಪ ಪೊಲೀಸ್ ಠಾಣೆ ಹಾಗೂ ಜನ ವಿಕಾಸ ವೃದ್ಧಾಶ್ರಮಕ್ಕೆ ತೆರಳಿ ಸಿಹಿ ವಿತರಿಸಿದರು.

ಈ ಸಂದರ್ಭ ಸುಂಟಿಕೊಪ್ಪ ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷರುಗಳಾದ ವಾಸು, ಬಿ.ಕೆ. ಪ್ರಶಾಂತ್, ನಗರ ಯುವ ಮೋರ್ಚಾ ಅಧ್ಯಕ್ಷ ವಿಘ್ನೇಶ್, ನಿಕಟಪೂರ್ವ ಅಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್, ಗ್ರಾ.ಪಂ. ಮಾಜಿ ಅಧ್ಯಕ್ಷೆ ಬಿ.ಐ. ಭವಾನಿ ಹಾಗೂ ಇತರರು ಇದ್ದರು.