ಸುಂಟಿಕೊಪ್ಪ, ಸೆ. 21: ಸಮೀಪದ ಮಾದಾಪುರ ಗ್ರಾಮ ಪಂಚಾಯಿತಿಯ ಇಗ್ಗುತಪ್ಪ ಕೊಡವ ಸಂಘದ ವತಿಯಿಂದ ಪಿಯುಸಿ ಮತ್ತು ಎಸ್ಎಸ್ಎಲ್ಸಿ ಯಲ್ಲಿ ತೇರ್ಗಡೆ ಹೊಂದಿದ ಸಂಘದ ಸದಸ್ಯರ ಮೂವರು ಮಕ್ಕಳಿಗೆ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಈ ಸಂದರ್ಭ ಸಂಘದ ಅಧ್ಯಕ್ಷ ನಾಪಂಡ ಉಮೇಶ್ ಉತ್ತಪ್ಪ ಮಾತನಾಡಿ ವಿದ್ಯಾರ್ಥಿಗಳಿಗೆ ವಿದ್ಯಾಬ್ಯಾಸಕ್ಕೆ ಸರಕಾರದಿಂದ ಸಕಲ ಸೌಲಭ್ಯವಿದೆ. ಆದರೂ ಪೋಷಕರು ಮಕ್ಕಳ ಬೇಡಿಕೆಗಳನ್ನು ಈಡೇರಿಸುವ ಜೊತೆಗೆ ಅದರ ಸದುಪಯೋಗ ಹೇಗೆ ಬಳಕೆಯಾಗುತ್ತದೆ ಎಂಬುದನ್ನು ಪರಿಶೀಲಿಸಬೇಕು. ಜೊತೆಗೆ ಮಕ್ಕಳನ್ನು ಎಚ್ಚರಿಕೆಯಿಂದ ಗಮನಿಸಿ ಸಂಸ್ಕಾರ ಸಂಸ್ಕøತಿಯನ್ನು ಮನೆಯಿಂದಲೇ ಕಲಿಸಬೇಕು. ಉತ್ತಮ ನಾಗರಿಕರಾಗಲು ಶಿಕ್ಷಣ ಅಗತ್ಯ ಎಂದರು. ಕಾರ್ಯಕ್ರಮದಲ್ಲಿ ಸಂಘದ ಕಾರ್ಯದರ್ಶಿ ಉಡುವೇರ ಮಿಟ್ಟು, ಸದಸ್ಯರು. ವಿದ್ಯಾರ್ಥಿಗಳಾದ ವೀಕ್ಷಾ, ಕುಟ್ಟಪ್ಪ, ಶ್ರೇಯ, ಪೋಷಕರು ಹಾಜರಿದ್ದರು.