ಸೋಮವಾರಪೇಟೆ, ಸೆ. 21: ಇಲ್ಲಿನ ಇನ್ನರ್‍ವೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ವತಿಯಿಂದ ಪಟ್ಟಣ ಪಂಚಾಯಿತಿಯ ಪೌರ ಕಾರ್ಮಿಕರಿಗೆ ಸ್ವೆಟರ್ ವಿತರಿಸಲಾಯಿತು. ಸಂಘದ ಸದಸ್ಯೆ ಲಕ್ಷ್ಮೀ ಗೋವಿಂದ್ ರೂ. 10 ಸಾವಿರ ದೇಣಿಗೆ ನೀಡಿದರು. ಈ ಸಂದರ್ಭ ಕ್ಲಬ್‍ನ ಅಧ್ಯಕ್ಷೆ ಕವಿತಾ ವಿರೂಪಾಕ್ಷ, ಉಪಾಧ್ಯಕ್ಷೆ ಆಶಾ ಯೋಗೇಂದ್ರ, ಕಾರ್ಯದರ್ಶಿ ಸರಿತಾ ರಾಜು, ಖಜಾಂಚಿ ನಂದಿನಿ ಗೋಪಾಲ್ ಹಾಗೂ ಪದಾಧಿಕಾರಿಗಳು ಮತ್ತು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಚಪ್ಪ ಉಪಸ್ಥಿತರಿದ್ದರು.