ನಾಪೋಕ್ಲು, ಸೆ. 21: ಸಮೀಪದ ಹಳೆ ತಾಲೂಕಿನ ಭಗವತಿ ಸಮುದಾಯ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಪೋಷಣಾ ಅಭಿಯಾನ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಕ್ಕಾಟಿರ ಮುತ್ತಪ್ಪ ವಹಿಸಿದ್ದರು. ಕಾರ್ಯಕ್ರಮದಲ್ಲಿ ಬಾಣಂತಿಯರು, ಗರ್ಭಿಣಿಯರು ಹಾಗೂ ಮಕ್ಕಳ ತೂಕ, ಎತ್ತರ ಪರಿಶೀಲಿಸಿ ಪೌಷ್ಟಿಕ ಆಹಾರ ಬಳಕೆಯ ಅಗತ್ಯತೆ ಕುರಿತು ಅರಿವು ಮೂಡಿಸಲಾಯಿತು. ಬಳಿಕ ಅಂಗನವಾಡಿ ಕೇಂದ್ರಗಳಲ್ಲಿ ಮೇಲ್ವಿಚಾರಕಿ ಶೀಲಾ ತರಕಾರಿ ಗಿಡ ನೆಡುವ ಕಾರ್ಯಕ್ಕೆ ಚಾಲನೆ ನೀಡಿದರು.

ಬಲ್ಲಮಾವಟಿ ಗ್ರಾಮದ ಮೇಲ್ವಿಚಾರಕಿ ಶೀಲಾ ಹಾಗೂ ಇಲಾಖಾಧಿಕಾರಿ ಭವ್ಯ ಹಿರಿಯ ಆರೋಗ್ಯ ಕಾರ್ಯಕರ್ತೆ ಉಮಾಮಹೇಶ್ವರಿ, ಆಶಾ ಕಾರ್ಯಕರ್ತೆ ರಮ್ಯಾ, ಆಶಾಲತಾ ಎಂ., ಶೋಭಾ, ಸುಜಾತ, ಶೈಲಜ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಬಲ್ಲಮಾವಟಿ ಮತ್ತು ನಾಪೋಕ್ಲು ವೃತ್ತದ ಅಂಗನವಾಡಿ ಕಾರ್ಯಕರ್ತೆಯರು ವಿವಿಧ ಬಗೆಯ ಪೌಷ್ಟಿಕ ಆಹಾರ ತಯಾರಿಸಿ ಪ್ರದರ್ಶಿಸಿದರು.