ಕುಶಾಲನಗರ, ಸೆ. 21: ಕುಶಾಲನಗರ ನಗರ ಕಾಂಗ್ರೆಸ್ ವತಿಯಿಂದ ಪಟ್ಟಣದ ವಿವಿಧ ವಾರ್ಡ್‍ಗಳ ನೂತನ ಅಧ್ಯಕ್ಷರನ್ನು ನೇಮಕ ಮಾಡಲಾಯಿತು.
ನಗರ ಕಾಂಗ್ರೆಸ್ ಅಧ್ಯಕ್ಷ ಶರೀಫ್ ಇಬ್ರಾಹಿಂ ನೇತೃತ್ವದಲ್ಲಿ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್. ಅನಂತಕುಮಾರ್ ಸಮ್ಮುಖದಲ್ಲಿ ವಾರ್ಡ್ ಅಧ್ಯಕ್ಷರುಗಳನ್ನು ನೇಮಿಸಿ ಪ್ರಮಾಣಪತ್ರ ವಿತರಿಸಿದರು.
2ನೇ ವಾರ್ಡ್‍ಗೆ ಕೆ.ಟಿ. ಅಶೋಕ್, 4ನೇ ವಾರ್ಡ್‍ಗೆ ಸಯ್ಯದ್ ಸಾಜಿದ್, 6ನೇ ವಾರ್ಡ್‍ಗೆ ಬಿ.ಎಸ್. ಮಂಜುನಾಥ್, 10 ನೇ ವಾರ್ಡ್‍ಗೆ ಹೆಚ್. ಅಶ್ರಫ್, 15ನೇ ವಾರ್ಡ್‍ಗೆ ಲೀಲಾವತಿ, 16ನೇ ವಾರ್ಡ್ ಗೆ ಬಿ.ಎಂ. ಸೋಮಶೇಖರ್ ಅವರುಗಳನ್ನು ಅಧ್ಯಕ್ಷರಾಗಿ ನೇಮಿಸಲಾಗಿದೆ.
ಈ ಸಂದರ್ಭ ಕೆಪಿಸಿಸಿ ಸಂಯೋಜಕ ಪ್ರದೀಪ್ ಕುಮಾರ್ ರೈ ಪಾಂಬಾರು, ಜಿಲ್ಲಾ ಎಸ್ಸಿ ಘಟಕದ ಉಪಾಧ್ಯಕ್ಷ ಜನಾರ್ಧನ್, ರಾಜ್ಯ ಕಾರ್ಮಿಕ ಘಟಕದ ಕಾರ್ಯದರ್ಶಿ ರವಿ ಅಜ್ಜಳ್ಳಿ, ಡಿಸಿಸಿ ಸದಸ್ಯೆ ಗೀತಾ ಧರ್ಮಪ್ಪ, ಪ್ರಮುಖರಾದ ದೇವ್, ಗೋವಿಂದರಾಜ್ ದಾಸ್ ಮತ್ತಿತರರು ಇದ್ದರು.