ಸುಂಟಿಕೊಪ್ಪ, ಸೆ.21: ಪ್ರಪಂಚದ 53 ದೇಶಗಳ ಪೈಕಿ ಭಾರತ ದೇಶವು ಬಹು ಪ್ರಾಚೀನ ದೇಶವಾಗಿದ್ದು ವಿಶೇಷ ಸಂಸ್ಕøತಿ, ಪರಂಪರೆ, ಆಧ್ಯಾತ್ಮಿಕತೆ ಹಾಗೂ ಮಾನವ ಸಂಪನ್ಮೂಲಗಳನ್ನು ಹೊಂದಿರುವ ದೇಶ ಎಂದು ನಾಗೇಂದ್ರ ಬಾಬು ನುಡಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ ಕೊಡಗು ಜಿಲ್ಲಾ ಘಟಕಕ್ಕೆ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಕುಶಾಲನಗರ ವಕೀಲರಾದ ನಾಗೇಂದ್ರ ಬಾಬು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಜಿಲ್ಲಾ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತಕ್ಕೆ ಆಧ್ಯಾತ್ಮಿಕತೆಯ ಪರಂಪರೆಗೆ ತನ್ನದೇ ಆದ ವೈಶಿಷ್ಟ್ಯವಿದೆ. ಉಳಿದ ದೇಶಗಳಲ್ಲಿ ಕೇವಲ ಐಚ್ಛಿಕ ಮತ್ತು ಐಕ್ಯತೆಯ ಚಿಂತನೆಯನ್ನು ಮಾತ್ರ ಕಾಣಬಹುದಾಗಿದೆ. ಶಂಕರಚಾರ್ಯರ ವಿಗ್ರಹರಾಧನೆಯ ತತ್ವದ ಅಡಿಪಾಯದಿಂದಾಗಿ ಬ್ರಾಹ್ಮಣರಿಗೆ ಸಮಾಜದಲ್ಲಿ ತನ್ನದೇ ಆದ ಗೌರವ ಸ್ಥಾನಮಾನವಿದೆ. ನಾವು ಒಗ್ಗಟ್ಟಿನಿಂದ ಮುನ್ನಡೆದರೆ ನಮ್ಮ ಹಕ್ಕುಬಾಧ್ಯತೆ, ಬೇಡಿಕೆಗಳನ್ನು ಈಡೇರಿಸಬಹುದು. ನಮ್ಮ ಇತಿಹಾಸ, ಸಂಸ್ಕøತಿ ಮತ್ತು ಸಂಪ್ರದಾಯವನ್ನು ಉಳಿಸಿ ಬೆಳೆಸಬೇಕಾಗಿದೆ ಎಂದರು. ಹಿರಿಯ ಅರ್ಚಕ ಹಾ.ಮಾ. ಗಣೇಶ್ ಶರ್ಮಾ ಮಾತನಾಡಿದರು.
ವೇದಿಕೆಯಲ್ಲಿ ಪರಿಷತ್ ಜಿಲ್ಲಾಧ್ಯಕ್ಷ ರಾಘವೇಂದ್ರ ಭಟ್, ಜಗದೀಶ್ ಉಡುಪ,ಕೃಷ್ಣಮೂರ್ತಿ ಭಟ್, ಸುಬ್ರಮಣ್ಯ ಭಟ್, ದರ್ಶನ್ ಭಟ್ ಇತರರು ಇದ್ದರು. ಪ್ರಸಾದ್ ಭಟ್ ಸ್ವಾಗತಿಸಿದರು.