ಶನಿವಾರಸಂತೆ, ಸೆ. 21: ಇಲ್ಲಿನ ಕಾನ್ವೆಂಟ್ ರಸ್ತೆಯ ನಿವಾಸಿ ಸಚಿನ್ ಎಂಬಾತನಿಗೆ ಸೇರಿದ ರೂ. 2.50 ಲಕ್ಷ ಬೆಲೆಯ ಕೆಟಿಎಂ ಬೈಕನ್ನು ಖರೀದಿಸಲು ಬಂದು ಟ್ರಯಲ್ ನೋಡುವ ನೆಪದಲ್ಲಿ ಬೈಕ್ನೊಂದಿಗೆ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಗೇಶ್ ಗೌಡ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿ ಬೈಕನ್ನು ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ದೇವರಾಜ್, ಅಪರಾದ ಪತ್ತೆದಳದ ಲೋಕೇಶ್, ಮುರುಳಿ, ಉಪವಿಭಾಗದ ಕ್ರೈಂ ಬ್ರ್ಯಾಂಚ್ನ ಸಜಿ ಮತ್ತು ಪ್ರಕಾಶ್, ಸಿಡಿಆರ್ ಘಟಕದ ರಾಜೇಶ್, ಗಿರೀಶ್ ಮಾಲ್ಗೊಂಡಿದ್ದರು.