ಚೆಟ್ಟಳ್ಳಿ, ಸೆ. 20: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾ ಸಮಿತಿಯ ವತಿಯಿಂದ ನೆರೆ ಸಂತ್ರಸ್ತ ಕುಟುಂಬಕ್ಕೆ ಮನೆ ಹಸ್ತಾಂತರ ಕಾರ್ಯಕ್ರಮವು ಕುಶಾಲನಗರದಲ್ಲಿ ನಡೆಯಿತು.

ಪಾಪ್ಯುಲರ್ ಫ್ರಂಟ್ ಕರ್ನಾಟಕ ರಾಜ್ಯಾಧ್ಯಕ್ಷ ಯಾಸಿರ್ ಹಸನ್, ಸಂತ್ರಸ್ತ ಕುಟುಂಬಕ್ಕೆ ಮನೆಯ ಕೀಲಿಕೈ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ರಾಜ್ಯ ಸಮಿತಿ ಸದಸ್ಯ ಖಾದರ್, ಕೊಡಗು ಜಿಲ್ಲಾಧ್ಯಕ್ಷ ಅಮೀನ್ ಮೊಹ್ಸಿನ್, ಎಸ್ ಡಿ ಪಿ ಐ ಜಿಲ್ಲಾಧ್ಯಕ್ಷ ಟಿ.ಎಚ್. ಅಬೂಬಕರ್, ಪಾಪ್ಯುಲರ್ ಫ್ರಂಟ್ ದ.ಕ.ಜಿಲ್ಲಾಸಮಿತಿ ಸದಸ್ಯ ಇಕ್ಬಾಲ್ ನೂರ್ ಮಸ್ಜಿದ್ ಅಧ್ಯಕ್ಷ ನಿಝಮುದ್ದೀನ್, ಜಾಮಿಯಾ ಮಸ್ಜಿದ್ ಕಮಿಟಿ ಸದಸ್ಯ ಮುಹಮ್ಮದ್ ರಫೀಕ್, ಮುಸ್ಲಿಂ ಒಕ್ಕೂಟ ಅಧ್ಯಕ್ಷ ಹನೀಫ್, ಜನತಾ ಕಾಲೋನಿ ಮಸ್ಜಿದ್ ಇಮಾಮ್ ಮೌಲಾನಾ ಅಬ್ದುಲ್ ರಹ್ಮಾನ್, ಹಿಲಾಲ್ ಮಸ್ಜಿದ್ ಕಮಿಟಿಯ ಮಾಜಿ ಸದಸ್ಯ ಅಬ್ದುಲ್ ರಹ್ಮಾನ್ ಉಪಸ್ಥಿತರಿದ್ದರು.