ಕಣಿವೆ, ಸೆ. 20: ಕ್ರೀಡೆಗಳು ವ್ಯಕ್ತಿಗಳ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಹೆಚ್ಚು ಸಹಕಾರಿಯಾಗಲಿವೆ ಎಂದು ಸೋಮವಾರಪೇಟೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಿ.ಬಿ. ಸುನಿಲ್ ಕುಮಾರ್ ಹೇಳಿದರು.
ಜಿಲ್ಲೆಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಗುಡ್ಡೆಹೊಸೂರಿನಲ್ಲಿ ನಡೆದ ದ್ವಿತೀಯ ವರ್ಷದ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಪಾಲ್ಗೊಂಡು ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಯಾವಾಗಲೂ ಒತ್ತಡದಿಂದ ಕಾರ್ಯ ನಿರ್ವಹಿಸುವುದರಿಂದ ಅವರಿಗೆ ಕ್ರೀಡೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ಸಹಕಾರಿಯಾಗಲಿವೆ ಎಂದು ಅವರು ಹೇಳಿದರು.
ಕ್ರೀಡಾಕೂಟದ ಡಬಲ್ಸ್ನಲ್ಲಿ ಗೋಣಿಕೊಪ್ಪ ಪಂಚಾಯಿತಿ ಪಿಡಿಓ ಪಿ.ಬಿ. ಶ್ರೀನಿವಾಸ್ ಹಾಗೂ ದುಂಡಳ್ಳಿ ಪಂಚಾಯಿತಿ ಪಿಡಿಓ ಸುಮೇಶ್ ತಂಡ ಪ್ರಥಮ, ಹರದೂರು ಪಂಚಾಯಿತಿ ಪಿಡಿಓ ವಿ.ಜಿ. ಲೋಕೇಶ್ ಹಾಗೂ ಸುಂಟಿಕೊಪ್ಪ ಪಂಚಾಯಿತಿ ಪಿಡಿಓ ಬಿ.ಹೆಚ್. ವೇಣುಗೋಪಾಲ ತಂಡ ದ್ವಿತೀಯ ಸ್ಥಾನಗಳಿಸಿತು. ಸಿಂಗಲ್ಸ್ ವಿಭಾಗದಲ್ಲಿ ಪಿ.ಬಿ. ಶ್ರೀನಿವಾಸ ಪ್ರಥಮ, ವಿ.ಜಿ. ಲೋಕೇಶ್ ದ್ವಿತೀಯ, ವೇಣುಗೋಪಾಲ ತೃತೀಯ ಬಹುಮಾನ ಪಡೆದರು. ಈ ಸಂದರ್ಭ ಜಿ.ಪಂ. ಅಧ್ಯಕ್ಷರ ಆಪ್ತ ಸಹಾಯಕ ಕಿರಣ್, ಐಎನ್ಎಸ್ ಸ್ಪೋಟ್ರ್ಸ್ ಕ್ಲಬ್ ವ್ಯವಸ್ಥಾಪಕ ಸೋಮಯ್ಯ ಬಹುಮಾನ ವಿತರಿಸಿದರು. ಕ್ರೀಡಾಕೂಟದಲ್ಲಿ ಎಂಟು ತಂಡಗಳು ಡಬಲ್ಸ್ ವಿಭಾಗಕ್ಕೆ, ಹದಿನಾರು ತಂಡಗಳು ಸಿಂಗಲ್ಸ್ ವಿಭಾಗಕ್ಕೆ ನೋಂದಾಯಿಸಿದ್ದವು. ಪಿಡಿಓ ವಿ.ಜಿ. ಲೋಕೇಶ್ ಕಾರ್ಯಕ್ರಮ ನಿರ್ವಹಿಸಿದರು.