ಸುಂಟಿಕೊಪ್ಪ, ಸೆ. 20: ಆಕಸ್ಮಿಕವಾಗಿ ತೋಡಿಗೆ ಕಾಲು ಜಾರಿ ಬಿದ್ದು ವೃದ್ಧೆಯೋರ್ವರು ಸಾವನ್ನಪ್ಪಿದ ಘಟನೆ ನಡೆದಿದೆ.ಅತ್ತೂರು ನಲ್ಲೂರು ಗ್ರಾಮಕ್ಕೆ ಸೇರಿದ ಉಪ್ಪುತೋಡುವಿನಲ್ಲಿರುವ ಪುರುಷೋತ್ತಮರೈ ಎಂಬವರ ಲೈನ್ ಮನೆಯ ಕಾರ್ಮಿಕಳಾದ ಜಾನಕಿ (68) ಭಾನುವಾರÀ ಬೆಳಿಗ್ಗೆ ಮನೆ ಸಮೀಪದಲ್ಲೇ ಇರುವ ತೋಡಿಗೆ ತೆರಳಿದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ. ಭಾರೀ ಮಳೆಯಿಂದ ತೋಡಿನಲ್ಲಿ ನೀರು ಉಕ್ಕಿ ಹರಿಯುತ್ತಿದ್ದು ನೀರಿನ ಸೆಳೆತಕ್ಕೆ ವೃದ್ಧೆ ಬಲಿಯಾಗಿದ್ದಾರೆ. ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ವೆಂಕಟರಮಣ, ಎಎಸ್‍ಐ ಶ್ರೀನಿವಾಸ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಮಹಜರು ನಡೆಸಿ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಯನ್ನು ನಡೆಸಿ ಮೃತ ದೇಹವನ್ನು ಕುಟುಂಬಸ್ಥರಿಗೆ ನೀಡಲಾಯಿತು.