ಶನಿವಾರಸಂತೆ, ಸೆ. 20: ಸಮೀಪದ ಕೊಡ್ಲಿಪೇಟೆ ಕ್ಲಸ್ಟರ್ ವ್ಯಾಪ್ತಿಯ ವಿವಿಧ ಶಾಲೆಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಎಸ್. ಪಾಂಡು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪಟ್ಟಣದ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗಕ್ಕೆ ಭೇಟಿ ನೀಡಿದ ಅವರು, ಶಾಲೆಯ ನವೀಕರಣ ಕುರಿತು ಮುಖ್ಯ ಶಿಕ್ಷಕ ಅಬ್ದುಲ್ ರಬ್ ಅವರೊಂದಿಗೆ ಸಮಾಲೋಚನೆ ನಡೆಸಿ ವಿವಿಧ ದಾಖಲೆಗಳನ್ನು ಪರಿಶೀಲಿ ಸಿದರು. ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ, ಕ್ರೀಡಾ ಹಾಗೂ ಸಾಂಸ್ಕøತಿಕ ನಿಧಿ, ಶಾಲಾ ಶುಲ್ಕಗಳ ಬಗ್ಗೆ ವಿದ್ಯಾರ್ಥಿಗಳ ಸಂಖ್ಯೆ, ಶಿಕ್ಷಕರ ಮಾಹಿತಿ ಹಾಗೂ ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿ ಪಡೆದರು.

ಶಿಕ್ಷಣಕ್ಕೆ ಪೂರಕವಾದ ವಾತಾವರಣ ನಿರ್ಮಾಣ ಮಾಡುವಂತೆ ಹಾಗೂ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದರು.

ವಿದ್ಯಾಗಮ, ಶೈಕ್ಷಣಿಕ ಚಟುವಟಿಕೆಗಳ ಕುರಿತು ಮಾಹಿತಿ ಪಡೆದ ಅವರು ಯಾವುದೇ ಸಂಘಟನೆಗಳ ಕಚೇರಿಯಲ್ಲಿ ವಿದ್ಯಾರ್ಥಿಗಳಿಗೆ ತರಗತಿ ನಡೆಸದಂತೆ ಸೂಚಿಸಿದರು.

ಶಾಲೆಯಲ್ಲಿ ಲಭ್ಯವಿರುವ ವಿಜ್ಞಾನ ಪ್ರಯೋಗಾಲಯದ ಬಗ್ಗೆ ಶಿಕ್ಷಕಿ ಎಂ.ಪಿ. ಶಿವಕುಮಾರಿ ಹಾಗೂ ಗಣಿತ ಚಟುವಟಿಕೆಗೆ ಲಭ್ಯವಿರುವ ಸಲಕರಣೆಗಳ ಬಗ್ಗೆ ಶಿಕ್ಷಕಿ ಬಿ.ವಿ. ಸುಮಾ ಅವರಿಂದ ಮಾಹಿತಿ ಪಡೆದರು. ತಾಲೂಕು ಶಿಕ್ಷಣ ಸಂಯೋಜಕ ಎಸ್.ಆರ್. ಶಿವಲಿಂಗ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಎನ್. ಮಂಜುನಾಥ್, ಸಂಪನ್ಮೂಲ ವ್ಯಕ್ತಿಗಳಾದ ಕೊಡ್ಲಿಪೇಟೆ ಕ್ಲಸ್ಟರ್‍ನ ಸುರೇಶ್, ಶನಿವಾರಸಂತೆ ಕ್ಲಸ್ಟರ್‍ನ ದಿನೇಶ್, ಗೋಣಿಮರೂರು ಕ್ಲಸ್ಟರ್‍ನ ಚಿಣ್ಣಪ್ಪ, ಶಿಕ್ಷಕರಾದ ಚಂದ್ರಶೇಖರ್ ಅಡ್ಮನಿ, ಯು.ಡಿ. ಮಂಜುನಾಥ್, ಕಿರಣ್, ಸುನಿಲ್ ಹಾಜರಿದ್ದರು.

ನಂತರ ಕ್ಷೇತ್ರ ಶಿಕ್ಷಣಾಧಿಕಾರಿ ಪಾಂಡು ಅವರು ಕಿರಿಕೊಡ್ಲಿಮಠದ ಶಾಲೆ, ವಿವಿಧ ಸರಕಾರಿ ಪ್ರಾಥಮಿಕ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.