ಮಡಿಕೇರಿ, ಸೆ. 20: ಪ್ರಾಕೃತಿಕ ವಿಕೋಪದಿಂದಾಗಿ 2018 ರಲ್ಲಿ ಹಾನಿಗೊಳಗಾಗಿದ್ದ ಎರಡನೇ ಮೊಣ್ಣಂಗೇರಿ ಗ್ರಾಮದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಸಸಿ ನೆಡುವ ಯೋಜನೆಗೆ ಚಾಲನೆ ನೀಡಲಾಯಿತು.

ರೋಟರಿ ವಲಯ ಸಹಾಯಕ ಗವರ್ನರ್ ಪಿ.ಕೆ. ರವಿ ಮತ್ತು ಎರಡನೇ ಮೊಣ್ಣಂಗೇರಿ ಗ್ರಾಮ ಪಂಚಾಯಿತಿ ಸದಸ್ಯ ಧನಂಜಯ್ ಅಗೋಳಿಕಜೆ ಸಸಿ ನೆಡುವ ಮೂಲಕ ಕಾರ್ಯ ಯೋಜನೆಗೆ ಚಾಲನೆ ನೀಡಿದರು.

ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪಿ.ಎಂ. ಸಂದೀಪ್, ಕಾರ್ಯದರ್ಶಿ ಸತೀಶ್ ಸೋಮಣ್ಣ, ಯೋಜನಾ ನಿರ್ದೇಶಕ ಎಂ.ಪಿ. ನಾಗರಾಜ್, ಮಿಸ್ಟಿ ಹಿಲ್ಸ್ ನಿರ್ದೇಶಕರುಗಳಾದ ಬಿ.ಕೆ. ರವೀಂದ್ರ ರೈ, ಎಂ. ಧನಂಜಯ್, ಹರೀಶ್ ಕುಮಾರ್ ಪಾಲ್ಗೊಂಡಿದ್ದರು.