ಗೋಣಿಕೊಪ್ಪ ವರದಿ, ಸೆ. 20: ಜೆಸಿಐ ಸಪ್ತಾಹ ಅಂಗವಾಗಿ ಪೊನ್ನಂಪೇಟೆ ಜೆಸಿಐ ವತಿಯಿಂದ ಅಲ್ಲಿನ ಕೊಡವ ಸಮಾಜ ಸಭಾಂಗಣದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು. ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ವಿಜೇತರಾದ ಕೊಟ್ಟಂಗಡ ಬೋಜಮ್ಮ, ವೀರಯೋಧ ಗೌರವ ಪಡೆದಿರುವ ಕೋಳೇರ ನರೇನ್ ಅವರುಗಳು ಸನ್ಮಾನ ಸ್ವೀಕರಿಸಿದರು. ಹಿರಿಯ ವೈದ್ಯ ಡಾ. ಕೆ.ಎನ್. ಚಂದ್ರಶೇಖರ್ ಮಾತನಾಡಿ, ಶೇ. 40 ರಷ್ಟು ಯುವ ಸಮುದಾಯವನ್ನು ಹೊಂದಿರುವ ಭಾರತದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಕೂಡ ಮುಖ್ಯ ವಿಚಾರವಾಗಿದೆ. ದುಶ್ಚಟಗಳಿಗೆ ಬಲಿಯಾಗುತ್ತಿರುವುದನ್ನು ನಿಯಂತ್ರಿಸಲು ಅವರಲ್ಲಿ ಜಾಗೃತಿ ಮೂಡಿಸಬೇಕಿದೆ. ಇದರಿಂದ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಎಂದರು.
ಸಪ್ತಾಹದ ಯೋಜನಾ ನಿರ್ದೇಶಕ ದಿಲನ್ ಚೆಂಗಪ್ಪ, ಘಟಕದ ಅಧ್ಯಕ್ಷ ಗಯಾ ಜೋಯಪ್ಪ, ಕಾರ್ಯದರ್ಶಿ ಎಂ.ಬಿ. ಬೋಪಣ್ಣ, ಜೆಸಿರೆಟ್ ಅಧ್ಯಕ್ಷೆ ಪುನಿತಾ ಡಿನ್ಸು, ಜೂನಿಯರ್ ಜೆಸಿ ಅಧ್ಯಕ್ಷ ಲಿವಿತ್ ಮುತ್ತಣ್ಣ ಇದ್ದರು.