ಮಡಿಕೇರಿ, ಸೆ. 19: ಕೊಡಗಿನಲ್ಲಿ ತನ್ನ ರಾಜಕೀಯ ನೆಲೆ ಕಂಡುಕೊಳ್ಳಲು ಪ್ರಯತ್ನ ಪಡುತ್ತಿರುವ ಕಾಂಗ್ರೆಸ್‍ನ ಕಾನೂನು ಘಟಕದ ರಾಜ್ಯಾಧ್ಯಕ್ಷ ಎ.ಎಸ್. ಪೆÇನ್ನಣ್ಣ ಅವರು ಇತ್ತೀಚೆಗೆ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವ ಬಿಜೆಪಿಯ ಸಿ.ಪಿ. ಯೋಗೇಶ್ವರ್ ಅವರ ವಿಧಾನ ಪರಿಷತ್ ಸದಸ್ಯತ್ವ ರದ್ದುಪಡಿಸ ಬೇಕೆಂದು ಒತ್ತಾಯಿಸಿರುವುದು ತಾವು ಗಾಜಿನ ಮನೆಯಲ್ಲಿ ನಿಂತು ಪಕ್ಕದ ಮನೆಗೆ ಕಲ್ಲು ಹೊಡೆಯುವ ಪ್ರಯತ್ನ ಎಂದು ಜಿಲ್ಲಾ ಬಿಜೆಪಿ ವಕ್ತಾರ ಮಹೇಶ್ ಜೈನಿ ಲೇವಡಿ ಮಾಡಿದ್ದಾರೆ.

ಆರೋಪ ಬಂದ ತಕ್ಷಣ ಸದಸ್ಯತ್ವ ರದ್ದುಗೊಳಿಸಬೇಕೆಂದು ಒತ್ತಾಯಿಸುವ ಇವರು ತಮ್ಮದೇ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಮೇಲಿರುವ ಅಕ್ರಮ ಹಣ ಸಂಪಾದನೆ ವಿಷಯಗಳ ಆರೋಪದ ಬಗ್ಗೆ ತಮ್ಮ ನಾಯಕನ ಶಾಸಕ ಸ್ಥಾನದ ರದ್ಧತಿ ವಿಚಾರದಲ್ಲಿ ಇದೇ ನಿಲುವನ್ನು ವ್ಯಕ್ತಪಡಿಸುತ್ತಾರೆಯೇ ಎಂಬುದನ್ನು ಪೆÇನ್ನಣ್ಣ ಅವರು ಸ್ಪಷ್ಟಪಡಿಸಬೇಕು. ಆರೋಪ ಬಂದ ತಕ್ಷಣ ತಮ್ಮ ಸ್ಥಾನದಿಂದ ರದ್ದುಗೊಳಿಸಬೇಕೆಂಬುದು ತಮ್ಮ ನಿಲುವು ಆದರೆ ಅದು ಯೋಗೇಶ್ವರ್‍ಗೂ ಒಂದೇ ಡಿ.ಕೆ. ಶಿವಕುಮಾರ್‍ಗೂ ಒಂದೇ ನ್ಯಾಯವಾಗಿರಬೇಕಲ್ಲವಾ ಎಂದು ಪ್ರಶ್ನಿಸಿದ್ದಾರೆ.

ಕೊಡಗು ಕಾಂಗ್ರೆಸ್‍ನ ಜಿಲ್ಲಾಧ್ಯಕ್ಷರು ತಮ್ಮ ಹೇಳಿಕೆಯಲ್ಲಿ ಕೊಡಗು ಕರ್ನಾಟಕದಲ್ಲಿ ಇಲ್ಲವೇ ಎಂದು ಕೇಳಿದ್ದಾರೆ. ಯಾಕೆ ಈ ಅನುಮಾನ ನಿಮ್ಮ ಸರ್ಕಾರದ ಅವಧಿಯಲ್ಲಿ ಕೊಡಗು ಎಲ್ಲಿ ಇತ್ತೋ ಅಲ್ಲೇ ಇದೆ. ಕೊಡಗು ಸೇರಿದಂತೆ ದೇಶದೆಲ್ಲೆಡೆ ಕೊರೊನಾ ವ್ಯಾಪಿಸಿರುವುದು ಅಕ್ಷರಸ ಸತ್ಯ. ಆದರೆ ಸರ್ಕಾರ ಕೈಕಟ್ಟಿ ಕುಳಿತಿಲ್ಲ. ಸರ್ಕಾರದ ದೃಢ ಮತ್ತು ಸಮಯೋಚಿತ ನಿರ್ಧಾರಗಳಿಂದ ಮತಷ್ಟು ಹಾನಿಯಾ ಗುವುದು ನಿಯಂತ್ರಣದಲ್ಲಿದೆ. ಸರ್ಕಾರ ಭೂಕುಸಿತ ಮತ್ತು ಮತ್ತಿತರ ಅನಾಹುತ ಗಳಿಂದ ತೊಂದರೆಯಾದ ಜನತೆಗೆ ಪರಿಹಾರವನ್ನು ನೀಡುತ್ತಾ ಬರುತ್ತಿದೆ. ಸರ್ಕಾರದ ಮೇಲೆ ಅನಾವಶ್ಯ ಆರೋಪವನ್ನು ಜಿಲ್ಲಾಧ್ಯಕ್ಷರು ನಿಲ್ಲಿಸಲಿ ಎಂದು ಮಹೇಶ್ ಜೈನಿ ಹೇಳಿದ್ದಾರೆ.