ಸೋಮವಾರಪೇಟೆ, ಸೆ.19: ಪ್ರತ್ಯೇಕ ಪ್ರಕರಣಗಳಲ್ಲಿ ಈರ್ವರು ಯುವತಿಯರು ನಾಪತ್ತೆಯಾಗಿರುವ ಬಗ್ಗೆ ಪೋಷಕರು, ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ತಾಲೂಕಿನ ಗರಗಂದೂರು ಗ್ರಾಮದ ದೇಜಪ್ಪ ಮತ್ತು ಶಾರದ ದಂಪತಿ ಪುತ್ರಿ ಸೌಮ್ಯ ಎಂಬಾಕೆ ಕಳೆದ ತಾ. 21ರಿಂದ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ತಾಲೂಕಿನ ಯಡವಾರೆ ಗ್ರಾಮದ ಪಾರ್ವತಮ್ಮ ಎಂಬವರ ಮೊಮ್ಮಗಳು ಲಾವಣ್ಯ ಎಂಬಾಕೆ ಕಳೆದ ತಾ. 8 ರಿಂದ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ.

ಈರ್ವರು ಯುವತಿಯರ ಬಗ್ಗೆ ಮಾಹಿತಿ ಇದ್ದಲ್ಲಿ ಸೋಮವಾರಪೇಟೆ ಪೊಲೀಸ್ ಠಾಣೆ, ದೂ: 08276282040, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ, ದೂ: 08272 229000 ಸಂಖ್ಯೆಗೆ ತಿಳಿಸುವಂತೆ ಠಾಣಾಧಿಕಾರಿ ಶಿವಶಂಕರ್ ಮನವಿ ಮಾಡಿದ್ದಾರೆ.