ಮಡಿಕೇರಿ, ಸೆ. 18: ಬೇಂಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 2020-21ನೇ ಸಾಲಿನ ಜಮಾಬಂದಿ ಸಭೆಯು ಪಂಚಾಯಿತಿ ಆಡಳಿತಾಧಿಕಾರಿ ಅನಿಲ್ ಬಾಲಚಂದ್ರ ಬಗಟಿ ಅವರ ಅಧ್ಯಕ್ಷತೆ ಹಾಗೂ ನೋಡಲ್ ಅಧಿಕಾರಿ ಶೇಖರ್, ಸಹಾಯಕ ನಿರ್ದೇಶಕರು, ಗ್ರೇಡ್ -1, ಸಮಾಜ ಕಲ್ಯಾಣ ಇಲಾಖೆ, ಮಡಿಕೇರಿ ಇವರ ಉಸ್ತುವಾರಿಯಲ್ಲಿ ತಾ. 23ರಂದು ಪೂರ್ವಾಹ್ನ 11 ಗಂಟೆಗೆ ಬೇಂಗೂರು ಪಂಚಾಯಿತಿ ಕಚೇರಿ ಆವರಣದಲ್ಲಿ ನಡೆಯಲಿದೆ.