ಗೋಣಿಕೊಪ್ಪ ವರದಿ, ಸೆ. 18 ; ಕಾಡಾನೆಗಳ ದಾಂಧಲೆ ಮಿತಿ ಮೀರಿದ್ದು, ಹೊಸಕೋಟೆ, ಹೊಸೂರು ಗ್ರಾಮದಲ್ಲಿ ರಸ್ತೆ ಬದಿಯಲ್ಲಿ ನಾಮಫಲಕ, ಸೂಚನಾ ಫಲಕಗಳನ್ನು ಕಿತ್ತುಹಾಕಿ ಕೋಪ ತೋರಿಸಿಕೊಂಡಿದೆ. ಗ್ರಾಮದ ರಸ್ತೆ ಬದಿಗಳಲ್ಲಿ ಹಾಕಿರುವ ರಸ್ತೆ ಸಂಪರ್ಕ ಮಾಹಿತಿ, ಸೂಚನಾಫಲಕ ಇಂತಹವುಗಳನ್ನು ತುಳಿದು ಉರುಳಿಸಿವೆ.
ಆನೆಗಳು ಉಪಟಳ ಈ ಹಂತಕ್ಕೆ ಬಂದಿರುವುದರಿಂದ ಗ್ರಾಮದಲ್ಲಿ ಆತಂಕ ಹೆಚ್ಚಾಗಿದೆ. ಇತ್ತೀಚೆಗಷ್ಟೆ ಸೋಲಾರ್ ದೀಪ ತುಳಿದು ನಾಶ ಮಾಡಿತ್ತು. ಈ ಬಗ್ಗೆ ಸ್ಥಳೀಯ ಅರಣ್ಯ ಇಲಾಕೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಕ್ರಮಕೈಗೊಳ್ಳಲಾಗಿದೆ.