ಗೋಣಿಕೊಪ್ಪ ವರದಿ, ಸೆ. 18: ಹುಲಿ ದಾಳಿಗೆ ಕೊಟ್ಟಗೇರಿ ಗ್ರಾಮದ ಅರಮಣಮಾಡ ವಿನು ಅವರಿಗೆ ಸೇರಿದ ಕರು ಬಲಿಯಾಗಿದೆ. ಗುರುವಾರ ರಾತ್ರಿ ಕೊಟ್ಟಿಗೆಗೆ ದಾಳಿ ಇಟ್ಟಿದೆ. ಈ ಸಂದರ್ಭ ಮನೆಯ ಜನರು ಕೂಗಿಕೊಂಡಾಗ ಹುಲಿ ಪರಾರಿಯಾಗಿದೆ. ಸ್ಥಳಕ್ಕೆ ಕಲ್ಲಳ್ಳ ವನ್ಯಜೀವಿ ವಲಯ ಅಧಿಕಾರಿ ಗಿರೀಶ್ ಚೌಗುಲೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.