ಗೋಣಿಕೊಪ್ಪಲು, ಸೆ. 18: ನಗರವನ್ನು ಶುಚಿಗೊಳಿಸಿ ನಾಗರಿಕರಿಗೆ ಅನುಕೂಲ ಕಲ್ಪಿಸುವ ಪೌರ ಕಾರ್ಮಿಕರನ್ನು ಗೌರವದಿಂದ ಕಾಣಬೇಕೆಂದು ಬೆಂಗಳೂರಿನ ಇಂಜಿನಿಯರಿಂಗ್ ಪದವೀಧರ ಸುರೇಶ್ ಹೇಳಿದರು. ಪೌರ ಕಾರ್ಮಿಕರ ಕಷ್ಟಗಳಿಗೆ ಸ್ಪಂದಿಸುವ ಸಲುವಾಗಿ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ವಸತಿ ಗೃಹಕ್ಕೆ ಆಗಮಿಸಿ 17 ಕುಟುಂಬಗಳಿಗೆ ಆಹಾರ ಕಿಟ್ಗಳನ್ನು ವೈಯಕ್ತಿಕವಾಗಿ ಅವರು ವಿತರಿಸಿ ಮಾತನಾಡಿದರು. ಅಂಬೇಡ್ಕರ್ ಸಂಘದ ಅಧ್ಯಕ್ಷ ಸಿಂಗಿ ಸತೀಶ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ದ.ಸಂ.ಸ. ಹೋರಾಟಗಾರ ಪರಶುರಾಮ್, ದ.ಸಂ.ಸ. ಮಾಜಿ ಜಿಲ್ಲಾ ಸಂಚಾಲಕ ಟಿ.ಎನ್. ಗೋವಿಂದಪ್ಪ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.