ಮಡಿಕೇರಿ, ಸೆ. 17: ಮೂರ್ನಾಡು ಪಟ್ಟಣದಲ್ಲಿ ವ್ಯಕ್ತಿಯೋರ್ವ ಮಾನಸಿಕ ಅಸ್ವಸ್ಥನಂತೆ ಅಲೆದಾಡುತ್ತಿದ್ದುದನ್ನು ಸಾರ್ವಜನಿಕರು ಗಮನಿಸಿದ್ದು, ಮೂರ್ನಾಡು ಫ್ರೆಂಡ್ಸ್ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ಅಧ್ಯಕ್ಷ ಪಿ.ಕೆ. ಅಬೂಬಕ್ಕರ್, ಕಾರ್ಯದರ್ಶಿ ರಶಿಕ ಉತ್ತಪ್ಪ, ಎಂ.ಕೆ. ಪ್ರವೀಣ್, ವಿಕಾಸ್ ಜನಸೇವಾ ಟ್ರಸ್ಟ್‍ನ ಅಧ್ಯಕ್ಷ ರಮೇಶ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಮೌಳಿ ಹಾಗೂ ಮೂರ್ನಾಡು ಪೆÇಲೀಸ್ ಉಪಠಾಣೆಯ ಮುಖ್ಯ ಪೇದೆ ರಾಜೇಶ್‍ಭಟ್ ಅವರ ಸಹಕಾರದೊಂದಿಗೆ ಆಂಬುಲೆನ್ಸ್‍ನಲ್ಲಿ ಮೈಸೂರಿನಲ್ಲಿರುವ ಗ್ರೀನ್ ಡಾಟ್ ಟ್ರಸ್ಟ್ (ರಿ) ಮಾನಸ ದಾಮ(ಮಾನಸಿಕ ರೋಗಿಗಳ ಆರೋಗ್ಯ ಹಾಗೂ ಪುನರ್ವಸತಿ ಕೇಂದ್ರ)ದಲ್ಲಿ ಚಿಕಿತ್ಸೆಗೆ ಒಳಪಡಿಸಲಾಯಿತು.