ಕ್ರೀಡೆ ಎಂಬುದು ವಿಶ್ವದ ಜನರ ಹೃದಯದ ಮಿಡಿತ. ಅದರಲ್ಲೂ ಭಾರತದಲ್ಲಿ ಕ್ರಿಕೆಟ್ ಯಾವ ರೀತಿ ಮನರಂಜನೆ ನೀಡುತ್ತದೆ ಅದೇ ರೀತಿ ವಿಶ್ವಕ್ಕೆ ಫುಟ್ಬಾಲ್ ಕ್ರೀಡೆ ಕೂಡ. ಕೊರೊನಾ ಮಹಾ ಮಾರಿಯಿಂದ ಎಲ್ಲೆಡೆ ಕ್ರೀಡೆ ಸ್ಥಗಿತ ಗೊಂಡು ಎಂಟರಿಂದ ಒಂಬತ್ತು ತಿಂಗಳು ಕಳೆದುಹೋಗಿವೆ. ಅದರಲ್ಲೂ ಫುಟ್ಬಾಲ್ ಲೀಗ್ ಪಂದ್ಯಾಟ ಸ್ಥಗಿತಗೊಂಡು ಕ್ರೀಡಾ ರಂಗಕ್ಕೆ ಕಪ್ಪುಚುಕ್ಕೆಯಾಗಿ ನಿಂತಿದೆ. ಈ ಸನ್ನಿವೇಶದಲ್ಲಿ ಕ್ರೀಡಾಭಿಮಾನಿಗಳನ್ನು ಹೊರತುಪಡಿಸಿ ಕ್ರೀಡಾಪಟುಗಳು ಮಾತ್ರ ಕ್ರೀಡಾಂಗಣಕ್ಕೆ ಬಂದು ಲೀಗ್ ಸರಣಿಗಳು ನಡೆಸಲು ಅಂತರರಾಷ್ಟ್ರೀಯ ಫುಟ್ಬಾಲ್ ಸಮಿತಿ ತೀರ್ಮಾನಿಸಿದೆ. ಅದರಂತೆ ಮೈದಾನದಲ್ಲಿ ಕ್ರೀಡಾಪಟುಗಳು ಮಾತ್ರ ಸೇರಿ ಫುಟ್ಬಾಲ್ ಕ್ರೀಡೆಗಳು ಪ್ರಾರಂಭವಾಯಿತು. ಅದರಂತೆ ಸ್ವೀಡನ್ ದೇಶದ ಫುಟ್ಬಾಲ್ ಕ್ರೀಡಾಂಗಣದಲ್ಲಿ ಯುಎಎಫ್‍ಎ ನೇಷನ್ ಲೀಗ್ ಪ್ರಾರಂಭವಾಯಿತು. ಅಂತರರಾಷ್ಟ್ರೀಯ ಫುಟ್ಬಾಲ್ ಪಂದ್ಯಾಟದಲ್ಲಿ ಶತಕಗಳ ಗೋಲು ಗಳಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆಯಲು ಫುಟ್ಬಾಲ್ ಕ್ರೀಡೆ ದಿಗ್ಗಜ, ಅಂತರರಾಷ್ಟ್ರೀಯ ಮಟ್ಟದ ದುಬಾರಿ ಆಟಗಾರ, ಪೆÇೀರ್ಚುಗಲ್ ತಂಡದ ನಾಯಕ, ಬಲಿಷ್ಠ ಕ್ರಿಸ್ಟಿಯಾನೋ ರೊನಾಲ್ಡೊ ಎರಡನೇ ಸ್ಥಾನವನ್ನು ತನ್ನದಾಗಿಸಿಕೊಂಡರು. ಬಲಿಷ್ಠ ಪೆÇೀರ್ಚುಗಲ್ ಮತ್ತು ಸ್ವೀಡನ್ ದೇಶದ ನಡುವಿನ ಪಂದ್ಯದಲ್ಲಿ ಮೊದಲರ್ಧದ ಕೊನೆಯ ನಿಮಿಷದಲ್ಲಿ ಪೆÇೀರ್ಚುಗಲ್‍ಗೆ ಸಿಕ್ಕಿದ ಪ್ರೀ ಕಿಕ್ ಅವಕಾಶವನ್ನು ಸದುಪಯೋಗ ಸರಿಪಡಿಸಿದ ನಾಯಕ ಕ್ರಿಸ್ಟಿಯಾನೋ ರೊನಾಲ್ಡೊ ತಮ್ಮ ಕಾಲ್ಚಳಕದಲ್ಲಿ ಗೋಲಾಗಿ ಪರಿವರ್ತಿಸಿ ಅಂತರರಾಷ್ಟ್ರೀಯ ಗೋಲುಗಳ ಶತಕದ ಸರದಾರ ಪಟ್ಟಿಯಲ್ಲಿ ತಮ್ಮ ಹೆಸರು ಅಳಿಸದಂತೆ ಯಶಸ್ವಿಯಾದರು. ಕ್ರಿಸ್ಟಿಯಾನೋ ರೊನಾಲ್ಡೊ. 165ನೇ ಅಂತರರಾಷ್ಟ್ರೀಯ ಪಂದ್ಯಾಟದಲ್ಲಿ ಈ ಸಾಧನೆ ಮಾಡಿದ್ದಾರೆ. ಅಂತರರಾಷ್ಟ್ರೀಯ ಪಂದ್ಯಾಟದಲ್ಲಿ ಶತಕಗಳ ಗೋಲು ಗಳಿಸಿದವರು ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಇರಾನ್ ದೇಶದ ಅಲಿ ದಯಿ ರವರು 149 ಪಂದ್ಯಾಟದಲ್ಲಿ 109 ಗೋಲುಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ಪೆÇೀರ್ಚುಗಲ್ ತಂಡದ ನಾಯಕ ಕ್ರಿಸ್ಟಿಯಾನೋ ರೊನಾಲ್ಡೊ 165 ಪಂದ್ಯದಲ್ಲಿ 101 ಗೋಲುಗಳಿಸಿ ಎರಡನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿ ಮೊಕ್ತಾರ್ ದಹರಿ ಮಲೇಷಿಯ ತಂಡದ ಆಟಗಾರ 131 ಪಂದ್ಯದಲ್ಲಿ 86 ಗೋಲುಗಳಿಸಿ ಮೂರನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಅತೀ ಹೆಚ್ಚು ಗೋಲುಗಳಿಸಿದವರ ಪಟ್ಟಿಯಲ್ಲಿ 10ನೇ ಸ್ಥಾನವನ್ನು ಭಾರತ ದೇಶದ ಫುಟ್ಬಾಲ್ ಕಣ್ಮಣಿ ಸುನಿಲ್ ಚೆಟ್ರಿ ಅವರು 115 ಪಂದ್ಯದಲ್ಲಿ 72 ಗುರುಗಳಿಗೆ 10ನೇ ಸ್ಥಾನವನ್ನು ಕಾಯ್ದು ಕೊಂಡಿದ್ದಾರೆ. ವಿಶ್ವದಲ್ಲಿರುವ ಅತಿ ಹೆಚ್ಚು ಶ್ರೀಮಂತ ಕ್ರೀಡಾ ಪಟುಗಳ ಪೈಕಿ ಕ್ರಿಸ್ಟಿಯಾನೋ ರೊನಾಲ್ಡೊ ಅವರು ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಅದೂ ಅಲ್ಲದೆ ಸಾಮಾಜಿಕ ಕ್ಷೇತ್ರದಲ್ಲಿ ತನ್ನದೇ ಆದ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಶಿಕ್ಷಣ, ಅರೋಗ್ಯ, ಕ್ರೀಡೆ ಮುಂತಾದ ಹಲವಾರು ವಿಷಯಗಳಲ್ಲಿ ಸಹಾಯ, ಸಹಕಾರ ನೀಡಿದ್ದಾರೆ. ಇವರಿಗೆ ವಿಶ್ವದಲ್ಲಿ ಕೋಟ್ಯಾಂತರ ಅಭಿಮಾನಿ ಬಳಗ ಹೊಂದಿದ್ದಾರೆ.?ನೌಫಲ್, ಕಡಂಗ.