ಸಿದ್ದಾಪುರ, ಸೆ. 17: ನೆಲ್ಲಿಹುದಿಕೇರಿಯ ಬಿಜೆಪಿ ಮಂಡಲದ ನೂತನ ಶಕ್ತಿಕೇಂದ್ರದ ಪ್ರಮುಖ್ ಆಗಿ ಬೆಳ್ಳಿಯಪ್ಪ ಆಯ್ಕೆಯಾಗಿದ್ದಾರೆ. ನೆಲ್ಲಿಹುದಿಕೇರಿಯ ಶ್ರೀ ಮುತ್ತಪ್ಪ ಸಭಾಂಗಣದಲ್ಲಿ ನಡೆದ ಬಿಜೆಪಿ ಸಂಘಟನಾ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.

ನೆಲ್ಲಿಹುದಿಕೇರಿ ಶಕ್ತಿ ಕೇಂದ್ರದ ಸಹ ಪ್ರಮುಖ್ ಆಗಿ ಪ್ರಮೋದ್, ಯುವಮೋರ್ಚಾ ಅಧ್ಯಕ್ಷರಾಗಿ ಸಚಿನ್, ಉಪಾಧ್ಯಕ್ಷರಾಗಿ ಶರಣ್, ಎಸ್.ಸಿ. ಮೋರ್ಚಾ ಅಧ್ಯಕ್ಷರಾಗಿ ಮಹೇಂದ್ರ, ಕೃಷಿ ಮೋರ್ಚಾ ಅಧ್ಯಕ್ಷರಾಗಿ ಚಂದ್ರಶೇಖರ್, ಹಿಂದುಳಿದ ವರ್ಗದ ಅಧ್ಯಕ್ಷರಾಗಿ ಯೋಗೇಶ್ ಆಯ್ಕೆಯಾದರು. ಆಯ್ಕೆ ಪ್ರಕ್ರಿಯೆಯು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹಾಗೂ ಬಿಜೆಪಿ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಮನು ರೈ ನೇತೃತ್ವದಲ್ಲಿ ನಡೆಯಿತು.

ಈ ಸಂದÀರ್ಭ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವಿ.ಕೆ. ಲೋಕೇಶ್, ಪಕ್ಷದ ಪ್ರಮುಖರಾದ ಅಚ್ಚಯ್ಯ, ಟಿ.ಸಿ. ಅಶೋಕ್, ಸುರೇಶ್ ನೆಲ್ಲಿಕಲ್, ವಸಂತ್ ಕುಮಾರ್ ಹೊಸಮನೆ ಇನ್ನಿತರರು ಹಾಜರಿದ್ದರು.