ಮಡಿಕೇರಿ, ಸೆ. 17: ಹಿಂದೂ ಜಾಗರಣ ವೇದಿಕೆ ಕೊಡಗು ಹಾಗೂ ‘ಸಿಕ್ಸ್ತ್ ಸೆನ್ಸ್ ಫೌಂಡೇಶನ್ ತಮಿಳುನಾಡು’ ಇವರುಗಳ ಸಹಯೋಗದಲ್ಲಿ ಕಳೆದ ತಿಂಗಳು ಕಡಗದಾಳುವಿನ ಬೊಟ್ಲಪ್ಪದಲ್ಲಿ ತೀವ್ರ ಮಳೆಯಿಂದ ಭೂಕುಸಿತದಿಂದ ಸಂಕಷ್ಟಕ್ಕೊಳಗಾದ 36 ಕುಟುಂಬಗಳ ಬಂಧುಗಳಿಗೆ ದಿನಸಿ ಸಾಮಗ್ರಿಗಳ ಕಿಟ್ ನೀಡಲಾಯಿತು.
ಈ ಸಂದÀರ್ಭ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಿ.ಬಿ. ಮಹೇಶ್, ಮಡಿಕೇರಿ ತಾಲೂಕು ಪ್ರಧಾನ ಕಾರ್ಯದರ್ಶಿ ಗಣೇಶ್ ಕಡಗದಾಳು, ಮಾತೃ ಸುರಕ್ಷಾ ಮಡಿಕೇರಿ ತಾಲೂಕ್ ಸಂಯೋಜಕ ವಿವೇಕ್, ಕಡಗದಾಳು ಮಂಡಲದ ಅಧ್ಯಕ್ಷ ಜನಾರ್ಧನ್ ನೀರುಕೊಲ್ಲಿ, ಮಂಡಲ ಪ್ರಧಾನ ಕಾರ್ಯದರ್ಶಿ ಪ್ರೇಮ್ ಕುಮಾರ್, ಬೊಟ್ಲಪ್ಪ ಘಟಕದ ಅಧ್ಯಕ್ಷ ಲಕ್ಷ್ಮಣ ಮತ್ತು ಪ್ರಧಾನ ಕಾರ್ಯದರ್ಶಿ ಹರೀಶ್ ಕಡಗದಾಳು, ವಲಯದ ಕಾರ್ಯಕರ್ತರು ಸೇರಿದಂತೆ ಸ್ಥಳೀಯ ಪ್ರಮುಖರು ಹಾಜರಿದ್ದರು.