ಮಡಿಕೇರಿ, ಸೆ. 17: ಕೊಡಗಿನಲ್ಲಿ ತನ್ನ ಕಾರ್ಯಯೋಜನೆಯನ್ನು ವಿಸ್ತರಿಸಿಕೊಳ್ಳುತ್ತಿರುವ ಅಖಿಲ ಭಾರತೀಯ ಸಾಹಿತ್ಯ ಪರಿಷತ್‍ನ ಜಿಲ್ಲಾಧ್ಯಕ್ಷರಾಗಿ ವಾಯುಪಡೆಯ ಮಾಜಿ ಅಧಿಕಾರಿ, ಕವಿ ಹಾಗೂ ಲೇಖಕರಾದ ಕಿಗ್ಗಾಲು ಗಿರೀಶ್ ಆಯ್ಕೆಯಾಗಿದ್ದಾರೆ.

ನಗರದ ವೇದಾಂತ ಸಂಘದಲ್ಲಿ ನಡೆದ ಸಭೆಯಲ್ಲಿ ಸರ್ವ ಸದಸ್ಯರ ಸಮ್ಮುಖದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿ ಭಾರತೀಯ ವಿದ್ಯಾ ಭವನದ ಚಿತ್ರಕಲಾ ಶಿಕ್ಷಕ ಪ್ರಸನ್ನ ಕುಮಾರ್, ಜಿಲ್ಲಾ ಕಾರ್ಯದರ್ಶಿಯಾಗಿ ಸಾಮಾಜಿಕ ಕಾರ್ಯಕರ್ತರು ಹಾಗೂ ಜಿ.ಪಂ ಮಾಜಿ ಸದಸ್ಯರಾದ ಬಬ್ಬಿರ ಸರಸ್ವತಿ ನೇಮಕಗೊಂಡಿದ್ದಾರೆ.

ಕೋಶಾಧಿಕಾರಿಯಾಗಿ ಕವಯಿತ್ರಿ ಹಾಗೂ ಅಂಕಣಕಾರರಾದ ಕಡ್ಲೆರ ಆಶಾ ಧರ್ಮಪಾಲ್, ಜಿಲ್ಲಾ ಸಮಿತಿ ಸದಸ್ಯರುಗಳಾಗಿ ಸಾಹಿತಿಗಳಾದ ಕಸ್ತೂರಿ ಗೋವಿಂದಮಯ್ಯ, ಸುಶೀಲ ಕುಶಾಲಪ್ಪ, ಜಾನಕಿ ಬೆಳ್ಳಿಯಪ್ಪ, ಮೊಣ್ಣಂಡ ಶೋಭಾ ಸುಬ್ಬಯ್ಯ, ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯರಾದ ಜಾನಕಿ ಮಾಚಯ್ಯ, ಅರೆಭಾಷಾ ಸಾಹಿತ್ಯ ಅಕಾಡೆಮಿ ಸದಸ್ಯರಾದ ಧನಂಜಯ ಅಗೊಳಿಕಜೆ, ಉಪನ್ಯಾಸಕರಾದ ಮಮತಾ ಪ್ರಸಾದ್, ಕಲಾವಿದೆ ಭಾರತಿ ರಮೇಶ್, ಸಾಮಾಜಿಕ ಕಾರ್ಯಕರ್ತರಾದ ಕೆ.ಕೆ. ದಿನೇಶ್ ಕುಮಾರ್ ಹಾಗೂ ಅಂಕಣಕಾರರಾದ ಕೋರನ ಸುನೀಲ್ ಅವರುಗಳನ್ನು ಆಯ್ಕೆ ಮಾಡಲಾಗಿದೆ ಎಂದು ಪರಿಷತ್‍ನ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂದನ್ ಭಟ್ ನರೂರ್ ಘೋಷಿಸಿದರು.

ಸಾಹಿತ್ಯದ ಹಲವಾರು ಕಾರ್ಯಕ್ರಮಗಳ ಆಯೋಜನೆಗಾಗಿ ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯ ಸಮಿತಿಗಳು ಆಯಾಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ನೂತನ ಜಿಲ್ಲಾಧ್ಯಕ್ಷ ಕಿಗ್ಗಾಲು ಗಿರೀಶ್ ತಿಳಿಸಿದ್ದಾರೆ.