ಸಂಘದ ಸದಸ್ಯರಿಗೆ 2014-15ರಿಂದ 2019-20ನೇ ಸಾಲಿನವರೆಗೆ ಸಂಘದಿಂದ ಸಾಲ ನೀಡಿದ ಮೊತ್ತವನ್ನು ಸಂಘದ ಬೈಲಾ ನಿಯಮಾವಳಿಗಳನ್ನು ಉಲ್ಲಂಘಿಸಿ ಸಾಲ ವಸೂಲಾತಿಗೆ ಸಂಬಂಧಿಸಿದಂತೆ ಅಸಲು ಮತ್ತು ಬಡ್ಡಿಯಲ್ಲಿ ರಿಯಾಯಿತಿ ನೀಡಿ ಸಂಘಕ್ಕೆ ನಷ್ಟ ಉಂಟು ಮಾಡಿರುವ ಕುರಿತು ತನಿಖೆಗೆ ಆದೇಶಿಸಲಾಗಿದೆ. ಸಂಘದ ಆಡಳಿತ ಮಂಡಳಿಯ ನಿರ್ದೇಶಕರುಗಳಿಗೆ ಮತ್ತು ಸಿಬ್ಬಂದಿ ವರ್ಗದವರಿಗೆ 2014-15 ರಿಂದ 2019-20ನೇ ಸಾಲಿನವರೆಗೆ ಸಂಘದಿಂದ ಸಾಲ ನೀಡಿದ ಮೊತ್ತವನ್ನು ಸಂಘದ ಬೈಲಾ ನಿಯಮಾವಳಿಗಳನ್ನು ಉಲ್ಲಂಘಿಸಿ ಸಾಲ ವಸೂಲಾತಿಗೆ ಸಂಬಂಧಿಸಿದಂತೆ ಅಸಲು ಮತ್ತು ಬಡ್ಡಿಯಲ್ಲಿ ರಿಯಾಯಿತಿ ನೀಡಿ ಸಂಘಕ್ಕೆ ನಷ್ಟ ಉಂಟು ಮಾಡಿರುವ ಕುರಿತು ತನಿಖೆ ನಡೆಯಲಿದೆ.ಸಂಘದ ಕಳೆದ ಎರಡು ವರ್ಷಗಳ ಅಂದರೆ 2018-19 ಮತ್ತು 2019-20ನೇ ಸಾಲಿನ ವೀರಾಜಪೇಟೆ ಮುಸ್ಲಿಂ ಬ್ಯಾಂಕ್ ಪ್ರಧಾನ ಕಚೇರಿ ಮತ್ತು ಗೋಣಿಕೊಪ್ಪ ಶಾಖೆಯ ನಗದು ಜಮಾ ಖರ್ಚಿನ ಲೆಕ್ಕದಲ್ಲಿ (ಹೊಂದಾಣಿಕೆ ಲೆಕ್ಕಗಳು) ಜಮಾ ರೂ. 15.40 ಲಕ್ಷ ಮತ್ತು ಖರ್ಚು ರೂ. 4,03,18,161 ಎಂದು ತೋರಿಸಿದ್ದು, ದಿನಾಂಕ 31.3.2020ರ ತಾತ್ಕಾಲಿಕ ಆಸ್ತಿ
(ಮೊದಲ ಪುಟದಿಂದ) ಜವಾಬ್ದಾರಿ ತಃಖ್ತೆಯಲ್ಲಿ ರೂ 3,96,42,181 ವಸೂಲಾತಿಗೆ ಇರುವ ಮೊತ್ತದ ಬಗ್ಗೆ ವಿಚಾರಣೆ ನಡೆಸಲು ಸೂಚಿಸಲಾಗಿದೆ. 2019-20ನೇ ಸಾಲಿನಲ್ಲಿ ತಾತ್ಕಾಲಿಕ ಜಮಾ ಖರ್ಚಿನಲ್ಲಿ ಚರ ಮತ್ತು ಸ್ಥಿರಾಸ್ತಿ ಸಂಬಂಧ, ಸಂಘದ ಸಿಬ್ಬಂದಿ ಹಾಗೂ ಆಡಳಿತ ವೆಚ್ಚಗಳಲ್ಲಿ ಅಮಾನತು ಸಾಲ ಖರ್ಚು ರೂ. 1,02,090 ಆರ್ಟಿಜಿಎಸ್ ರೂ.3,00,000, ಕಟ್ಟಡ ಖರ್ಚು ಮುಂಗಡ ರೂ. 4,67,570, ಕಟ್ಟಡ ಖರ್ಚು ರೂ. 1,23,856, ಕಟ್ಟಡ ದುರಸ್ತಿ ರೂ, 2,59,090, ಸಾದಿಲ್ವಾರು ಖರ್ಚು ರೂ. 4,56,706, ಪೀಠೋಪಕರಣ ದುರಸ್ತಿ ರೂ. 89,560 ಹಾಗೂ ಮಹಾಸಭೆ ಖರ್ಚು ರೂ. 11,27,585 ಗಳ ಖರ್ಚಿನ ಬಗ್ಗೆ ವಿಚಾರಣೆ ಹಾಗೂ ಕಳೆದ 1.4.2014 ರಿಂದ 31.3.2020 ರವರೆಗೆ (ಆರು ವರ್ಷಗಳ) ಸಂಘದಲ್ಲಿ ಅಪಾರ ಪ್ರಮಾಣದ (ಕಟ್ಟಡ ಖರ್ಚು, ಆಡಳಿತಾತ್ಮಕ ವೆಚ್ಚ ಹಾಗೂ ಅಮಾನತು ಸಾಲ ಮತ್ತು ಇತರೆ) ದುಂದುವೆಚ್ಚಗಳಿಂದ ಸಂಘಕ್ಕೆ ಉಂಟಾಗಿರುವ ನಷ್ಟದ ಬಗ್ಗೆ ತನಿಖೆ ನಡೆಸಲು ನಿರ್ದೇಶಿಸಲಾಗಿದೆ.
ಸಂಘದ ಕಳೆದ ಆರು ವರ್ಷಗಳ ಅಂದರೆ 2014-15 ರಿಂದ 2019-20ನೇ ಸಾಲಿನವರೆಗೆ ಹಾಗೂ 2020-21ನೇ ಸಾಲಿನ (ದಿನಾಂಕ: 1.4.2020 ರಿಂದ 31.7.2020ರವರೆಗೆ) ಸದಸ್ಯರಿಂದ ಹಾಗೂ ಸದಸ್ಯೇತರರಿಂದ (ಸಾರ್ವಜನಿಕರು, ಸಹಕಾರ ಸಂಘಗಳಿಂದ) ಸಂಘದ ಬೈಲಾ ನಿಯಮಾವಳಿಗಳನ್ನು ಉಲ್ಲಂಘಿಸಿ ಅಲ್ಪಾವಧಿ ಅವಧಿಗೆ ಹೆಚ್ಚಿನ ಬಡ್ಡಿ ನೀಡಿ ನಿರಖು ಠೇವಣಿಯನ್ನು ಸಂಗ್ರಹಿಸಿರುವುದರಿಂದ ಸಂಘಕ್ಕೆ ನಷ್ಟ ಉಂಟಾಗಿರುವ ಕುರಿತು ತನಿಖೆಯೊಂದಿಗೆ, ಸಂಘವು ಕಟ್ಟಡದ ಕೊಠಡಿಗಳನ್ನು ಬಾಡಿಗೆಗೆ ನೀಡಿದ್ದು, ಬಾಡಿಗೆ ದರವನ್ನು ನಿಗದಿಪಡಿಸುವ ಸಂದರ್ಭದಲ್ಲಿ ಹಾಗೂ ಬೇನಾಮಿ ಹೆಸರಿನಲ್ಲಿ ಬಾಡಿಗೆ ಪಡೆದು ಅನ್ಯರಿಗೆ ದುಬಾರಿ ದರದಲ್ಲಿ ಬಾಡಿಗೆ ನೀಡಿ ಸಂಘಕ್ಕೆ ನಷ್ಟ ಉಂಟು ಮಾಡಿರುವ ಬಗ್ಗೆ ಕ್ರಮಕ್ಕೆ ಸೂಚಿಸಲಾಗಿದೆ.
ಈ ಮೇಲ್ಕಂಡ ಅಂಶಗಳು ಸೇರಿದಂತೆ ಸಂಘದಲ್ಲಿ ಕಳೆದ ಆರು ವರ್ಷಗಳಲ್ಲಿ ನಡೆದಿರುವ ಇನ್ನಿತರೆ ವ್ಯವಹಾರಗಳ ಕುರಿತು ಸಂಘಕ್ಕೆ ಆಗಿರುವ ನಷ್ಟದ ಬಗ್ಗೆ ವಿಚಾರಣೆ ಒಳಪಡಿಸಿದ ಎಲ್ಲಾ ಅಂಶಗಳ ಬಗ್ಗೆ ವಿಚಾರಣೆ ನಡೆಸಿ, ಅವ್ಯವಹಾರ, ನಷ್ಟಕ್ಕೆ ಸಂಬಂಧಿಸಿದಂತೆ ಜವಾಬ್ದಾರಿಕೆಯನ್ನು ಮುಂದಿನ 60 ದಿವಸದೊಳಗೆ ಈ ಕಚೇರಿಗೆ 5 ಪ್ರತಿಗಳಲ್ಲಿ ಸಲ್ಲಿಸತಕ್ಕದ್ದು ಎಂದು ತನಿಖಾಧಿಕಾರಿಗೆ ಉಪ ನಿಂಬಂಧಕರು ಆದೇಶಿಸಿದ್ದಾರೆ.