ಮಡಿಕೇರಿ, ಸೆ. 16: ಭೂಕುಸಿತದಿಂದ ಮೃತರಾದ ಶ್ರೀ ತಲಕಾವೇರಿ ದೇವಸ್ಥಾನ ಪ್ರಧಾನ ಅರ್ಚಕರಾಗಿದ್ದ ದಿವಂಗತ ಟಿ.ಎಸ್. ನಾರಾಯಣಾಚಾರ್ ಹಾಗೂ ನಾರಾಯಣಾಚಾರ್ ಅವರ ಧರ್ಮಪತ್ನಿ ಟಿ.ಎಸ್. ಶಾಂತಾ, ಅವರ ಸಹೋದರರಾದ ಟಿ.ಎಸ್.ಆನಂದತೀರ್ಥ ಹಾಗೂ ಸಹಾಯಕ ಅರ್ಚಕರಾಗಿದ್ದ ಶ್ರೀನಿವಾಸ ಪಡಿಲ್ಲಾಯ ಮತ್ತು ರವಿಕಿರಣ್ ಇವರುಗಳ ಆತ್ಮಕ್ಕೆ ಶಾಂತಿ ಸಿಗಲೆಂದು ಶ್ರೀ ಭಗಂಡೇಶ್ವರ-ಶ್ರೀ ತಲಕಾವೇರಿ ದೇವಾಲಯದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ ಅಧ್ಯಕ್ಷತೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭ ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳಾದ ಕೋಡಿ ಮೋಟಯ್ಯ, ಕೆದಂಬಾಡಿ ಟಿ.ರಮೇಶ್, ಉದಿಯಂಡ.ಪಿ.ಸುಭಾಸ್, ನಿಡ್ಯಮಲೆ ಸುರೇಶ್ ಮೀನಾಕ್ಷಿ, ಕೆ.ಎಸ್. ಅಣ್ಣಯ್ಯ, ಅರ್ಚಕರಾದ ಎಸ್, ರವಿಕುಮಾರ್ ಮತ್ತು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಿ.ಎಂ. ಕೃಷ್ಣಪ್ಪ ಉಪಸ್ಥಿತರಿದ್ದರು.