ಶನಿವಾರಸಂತೆ, ಸೆ. 16: ಪಟ್ಟಣದ ಅಂಬೇಡ್ಕರ್ ಸಮುದಾಯ ಭವನದಲ್ಲಿ ದಲಿತ ಸಂಘರ್ಷ ಸಮಿತಿ ಹೋಬಳಿ ಘಟಕದ ಸಭೆ ಮುಖಂಡ ಎಂ.ಜಿ. ಶಿವಶಂಕರ್ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಹೋಬಳಿ ಸಮಿತಿ ಹಾಗೂ ಕಾರ್ಯಕಾರಿ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಹೋಬಳಿ ಸಮಿತಿ ಅಧ್ಯಕ್ಷರಾಗಿ ಎಸ್.ಎಸ್. ಶಿವಲಿಂಗ, ಗೌರವಾಧ್ಯಕ್ಷರಾಗಿ ಎಂ.ಈ. ಸಣ್ಣಯ್ಯ, ಉಪಾಧ್ಯಕ್ಷರಾಗಿ ಜಗಕಿತ್ತೂರು, ಮಂಜಣ್ಣ, ಪ್ರಧಾನ ಕಾರ್ಯದರ್ಶಿಯಾಗಿ ಗುರು, ಸಹ ಕಾರ್ಯದರ್ಶಿಗಳಾಗಿ ದಯಾಕಿತ್ತೂರು, ಜಗಸಂಪಿಗೆಹಾಳ್, ಖಜಾಂಚಿಯಾಗಿ ಮದನ್ ಮತ್ತು ಆದಿ ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆ ಪ್ರಕ್ರಿಯೆ ಕೂಡ ನಡೆಯಿತು. ಮುಖಂಡರಾದ ಜೆ.ಆರ್. ಪಾಲಾಕ್ಷ, ಎಂ.ಈ. ಸಣ್ಣಯ್ಯ, ಸಂದೀಪ್, ಎಸ್.ಜೆ. ರಾಜಪ್ಪ ಉಪಸ್ಥಿತರಿದ್ದರು.