ನಾಪೆÇೀಕ್ಲು, ಸೆ. 16: ಭವಿಷ್ಯದಲ್ಲಿ ಮಕ್ಕಳು ಶಿಕ್ಷಣದಲ್ಲಿ ವಂಚಿತರಾಗಬಾರದೆಂಬ ನಿಲುವನ್ನು ತಳೆದಿರುವ ಬೇತು ಗ್ರಾಮದ ಸೇಕ್ರೆಡ್ ಹಾರ್ಟ್ ಶಾಲೆಯ ಶಿಕ್ಷಕರು. ಆನ್‍ಲೈನ್ ಶಿಕ್ಷಣದಿಂದ ವಂಚಿತರಾದ ಮಕ್ಕಳ ಗ್ರಾಮಗಳಿಗೆ ತೆರಳಿ ಮಕ್ಕಳಿಗೆ ಗ್ರಾಮಗಳಲ್ಲಿ ಬಸ್ ತಂಗುದಾಣಗಳಲ್ಲಿ ತರಗತಿಯನ್ನು ತೆಗೆದುಕೊಳ್ಳುತ್ತಿದ್ದಾರೆ.

ಈಗಾಗಲೇ ಶಾಲೆಯ ಅಧ್ಯಕ್ಷ ಬದ್ದಾಂಜಟ್ಟೀರ ಗಪ್ಪಣ್ಣ ಅವರ ನೇತೃತ್ವದಲ್ಲಿ ಶಾಲೆಯ ಶಿಕ್ಷಕರು ಈ ವಿನೂತನ ಪ್ರಯೋಗವನ್ನು ಮಾಡಿ ವಿದ್ಯಾರ್ಥಿಗಳು ದೃತಿಗೆಡದಂತೆ ಮತ್ತು ಶಿಕ್ಷಣದಿಂದ ವಂಚಿತರಾಗದಂತೆ ಕ್ರಮಕೈಗೊಂಡಿರುವುದು ಈ ವಿಭಾಗದ ಪೋಷಕರಿಗೆ ಸಂತೋಷವನ್ನುಂಟು ಮಾಡಿದೆ.

ಸೇಕ್ರೆಡ್ ಹಾರ್ಟ್ ಶಾಲೆಯ ಶಿಕ್ಷಕರ ತಂಡದ ಮಮತ, ಸುನೀಲ್, ಕಿರಣ್, ಮೈನಾ, ಯಮುನ, ತಸ್ವಿನಿ, ನೀಲಮ್ಮ, ದಮಯಂತಿ, ಕವಿತ ಇವರುಗಳು ಈ ವಿಭಾಗದ ಎಡಪಾಲ, ಪಾರಾಣೆ, ಚೆಯ್ಯಂಡಾಣೆ, ಕೊಳಕೇರಿ. ಕೊಕೇರಿ, ಎಮ್ಮೆಮಾಡು, ಬೇತು, ಹೊದ್ದೂರು, ಚೆರಿಯ ಪರಂಬು, ನಾಪೆÇೀಕ್ಲು, ನೆಲಜಿಯಲ್ಲಿ ಇಂತಹ ವಿನೂತನ ಕಾರ್ಯ ವನ್ನು ಕೈಗೊಂಡಿದ್ದಾರೆ. ಅದರಂತೆ ಇವರಿಗೆ ಮಕ್ಕಳ ಪೋಷಕರು ಸಹ ಸಹಮತ ವ್ಯಕ್ತಪಡಿಸಿ ಮಕ್ಕಳನ್ನು ಕಳುಹಿಸಿ ಮಕ್ಕಳ ಭವಿಷ್ಯವನ್ನು ರೂಪಿಸಲು ಮುಂದಾಗಿರು ವುದು ಉತ್ತಮ ಬೆಳವಣಿಗೆಯಾಗಿದೆ.

- ದುಗ್ಗಳ ಸದಾನಂದ.