ಕಣಿವೆ, ಸೆ. 15: ಕೇಂದ್ರ ಸರ್ಕಾರದ ಪ್ರಸ್ತಾವಿತ ನೂತನ ರಾಷ್ಟ್ರೀಯ ಹೆದ್ದಾರಿ ಮಾರ್ಗವನ್ನು ಶಾಸಕ ಅಪ್ಪಚ್ಚು ರಂಜನ್ ಮಂಗಳವಾರ ಬಸವನಹಳ್ಳಿ ಹಾಗೂ ಆನೆಕಾಡು ಬಳಿ ಪರಿಶೀಲನೆ ನಡೆಸಿದರು.

ನೂತನ ಹೆದ್ದಾರಿ ಮಾರ್ಗದಿಂದ ಸಂತ್ರಸ್ತರಾಗಲಿರುವ ಬಸವನಹಳ್ಳಿ ಹಾಗೂ ಆನೆಕಾಡು ನಿವಾಸಿಗಳ ಕೋರಿಕೆ ಮೇರೆಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದ ಶಾಸಕರು, ಇದು ಕೇಂದ್ರದ ಯೋಜನೆ ಯಾಗಿರುವು ದರಿಂದ ಸಂಸದ ಪ್ರತಾಪ್ ಸಿಂಹ, ಕೇಂದ್ರ ಸಚಿವ ಸದಾನಂದ ಗೌಡ ಅವರ ಬಳಿ ವಿಚಾರದ ಬಗ್ಗೆ ಚರ್ಚಿಸಲಾಗುವುದು ಎಂದರು.

ಈ ಸಂದರ್ಭ ಜೊತೆಗಿದ್ದ ಸ್ಥಳೀಯ ನಿವಾಸಿಗಳಾದ ಗುಡ್ಡೆಮನೆ ಅಶ್ವಥ್, ಅನಂತ್, ಮಹೇಂದ್ರ ಮೊದಲಾದವರು ನೂತನವಾಗಿ ಪ್ರಸ್ತಾಪದಲ್ಲಿರುವ ರಾಷ್ಟ್ರೀಯ ಹೆದ್ದಾರಿ ನಮ್ಮ ಬದುಕಿನ ಮೂಲಗಳಾದ ಮನೆಗಳು ಹಾಗೂ ಬಿತ್ತುಣ್ಣುವ ಭೂಮಿಯನ್ನು ಕೂಡ ಅಪೆÇೀಷನ ಗೈಯಲಿದೆ. ಇದರಿಂದಾಗಿ ನಮ್ಮ ಬದುಕು ಮೂರಾಬಟ್ಟೆ ಯಾಗಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅದೇನೆ ಪರಿಹಾರ ಕೊಟ್ಟರೂ ನಾವು ಹಾಗೂ ಪೂರ್ವಜರು ಬಾಳಿ ಬದುಕಿದ ಮನೆ, ಹೊಲ ಗದ್ದೆಗಳನ್ನು ಬಿಟ್ಟಿರಲಾರೆವು. ದಯಮಾಡಿ ಮಾರ್ಗವನ್ನು ಬದಲಿಸಲು ನಮಗೆ ನೆರವಾಗಿ ಎಂದು ಶಾಸಕರಲ್ಲಿ ಮನವಿ ಮಾಡಿದರು.

ಈ ಸಂದರ್ಭ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯೆ ಮಂಜುಳಾ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಬಿ. ಭಾರತೀಶ್ ಪಕ್ಷದ ಪ್ರಮುಖರಾದ ಕುಮಾರಪ್ಪ, ಪುಂಡರೀಕಾಕ್ಷ, ಉಮಾಶಂಕರ್, ವೈಶಾಕ್, ಕೃಷ್ಣಪ್ಪ, ಕೆ.ಜಿ. ಮನು ಮೊದಲಾದವರಿದ್ದರು.